Breaking
31 Oct 2025, Fri

ಕೋರ್ಟ್ ಎದರಲ್ಲೆ ನ್ಯಾಯವಾದಿಯ ಮೇಲೆ ಹತ್ಯಾ ಯತ್ನ

ಫೋಟೋದಲ್ಲಿ ಕಾಣ್ತಿರುವಂತಹ ವ್ಯಕ್ತಿ ಹೆಸರು ಕಣ್ಣನ್ .. ವೃತ್ತಿಯಲ್ಲಿ ವಕೀಲನಾಗಿ ತಮಿಳುನಾಡಿನ ಹೊಸೂರಿನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾನೆ ಎಂದಿನಂತೆ ಇಂದು ಕೂಡ ಕೋರ್ಟಿಗೆ ಹಾಜರಾಗಿ ಕೇಸ್ ಒಂದರ ವಾದ ಮುಗಿಸಿ ಹೊರಬಂದಿದ್ದ.. ಕೋರ್ಟ್ ನಿಂದ ಹೊರಬಂದ ತಕ್ಷಣವೇ ನ್ಯಾಯಾಲಯದ ಮುಂಭಾಗದಲ್ಲೆ ಏಕಾಏಕಿ ಆನಂದ್ ಎಂಬ ವ್ಯಕ್ತಿ ಮಚ್ಚಿನಿಂದ ಕಣ್ಣನ್ ಮೇಲೆ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದ್ದಾನೆ .. ಇದರಿಂದ ಸ್ಥಳದಲ್ಲಿ ರಕ್ತ ಸಿಕ್ತನಾಗಿ ಕಣ್ಣನ್ ರಸ್ತೆಯಲ್ಲಿ ಕುಸಿದು ಬಿದ್ದಿದ್ದು ಉಸಿರಾಡುತ್ತಿದ್ದನ್ನು ಕಂಡು ಸ್ಥಳೀಯರು ಸದ್ಯ ಕಣ್ಣನ್ ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಸದ್ಯ ವಕೀಲ ಕಣ್ಣನ್ ಹೊಸೂರಿನ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.. ಯತ್ನಿಸಿದ ಆರೋಪಿ ಆನಂದ್ ಕೂಡಲೇ ನ್ಯಾಯಾಲಯದಲ್ಲಿ ಹೋಗಿ ಶರಣಾಗಿದ್ದು ಹತ್ಯಾಯತ್ನಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಸದ್ಯ ಹೊಸೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆನಂದ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಸಾರ್ವಜನಿಕರು ಓಡಾಡುತ್ತಿರುವಾಗಲೇ ಹಾಡುಹಗಲೇ ನ್ಯಾಯಾಲಯದ ಮುಂದೆ ವಕೀಲನ ಅತ್ಯಾಯತ್ನ ಹೊಸೂರಿನ ಜನತೆಯನ್ನು ಬೆಚ್ಚಿ ಬೆಳಿಸಿದೆ.. ವಕೀಲರಿಗೆ ರಕ್ಷಣೆ ಇಲ್ಲವೆಂದರೆ ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಏನು ಎಂಬುದು ಅಲ್ಲಿನ ವಕೀಲರ ಮಾತಾಗಿದ್ದು ರಸ್ತೆಗಳಿದು ವಕೀಲರು ಈ ವಿಚಾರವಾಗಿ ಪ್ರತಿಭಟನೆ ಸಹ ನಡೆಸಿದ್ದಾರೆ … ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು ಸದ್ಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆಇನ್ನು ಹೊಸುರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಂತರ ಸತ್ಯತೆ ಹೊರಬೀಳಬೇಕಿದೆ

Leave a Reply