Breaking
30 Oct 2025, Thu

ಕೆಪಿಸಿಸಿ ಶಿಕ್ಷಕರ ಘಟಕದ ನೂತನ ರಾಜ್ಯ ಉಪಾಧ್ಯಕ್ಷರಾದ ವಿಜಯಕುಮಾರ್ ಗೌಡರಿಗೆ ಅಭಿನಂದನೆ ಸಲ್ಲಿಕೆ

ಆನೇಕಲ್ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ ಘಟಕದ ನೂತನ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ವಿಜಯಕುಮಾರ್ ಗೌಡ ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಬುಧವಾರ (ಸೆಪ್ಟೆಂಬರ್ 17, 2025) ಆನೇಕಲ್ ನ ಚಂದಾಪುರ ಪುರಸಭೆ ವ್ಯಾಪ್ತಿಯ ಸೂರ್ಯ ಸಿಟಿ ಮೊದಲ ಹಂತದಲ್ಲಿರುವ ಶಾಸಕರ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಅಭಿನಂದನಾ ಸಮಾರಂಭ ನಡೆಯಿತು.

ಕಾರ್ಯಕ್ರಮದ ವೇಳೆ ಸ್ಥಳೀಯ ಮುಖಂಡರುಗಳು ಬೃಹತ್ ಗಾತ್ರದ ಹೂವಿನ ಹಾರ ಹಾಕಿ, ಸಿಹಿ ಹಂಚಿ ವಿಜಯಕುಮಾರ್ ಗೌಡ ಅವರಿಗೆ ಶುಭ ಕೋರಿದರು. ಈ ಸನ್ಮಾನಕ್ಕೆ ವಿಜಯಕುಮಾರ್ ಗೌಡರು ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಅವರು ಆನೇಕಲ್ ಕ್ಷೇತ್ರದ ಶಾಸಕ ಬಿ.ಶಿವಣ್ಣ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನ ಜಿಲ್ಲಾ ಉಪಾಧ್ಯಕ್ಷ ರಾಚಮಾನಹಳ್ಳಿ ಮನೋಹರ್, ಯುವ ಕಾಂಗ್ರೆಸ್ ನ ಆನೇಕಲ್ ಬ್ಲಾಕ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೂರ್ಯ ಜೈ ಭೀಮ್, ಮತ್ತು ಕಾಂಗ್ರೆಸ್ ಮುಖಂಡರಾದ ಕೂನುಮಡಿವಾಳ ಮುನಿರಾಜ್, ಸಿಂಗೇನ ಅಗ್ರಹಾರ ಗೌರೀಶ್, ಮಂಚನಹಳ್ಳಿ ಅಶೋಕ್ ಮಹಾರಾಜ್, ಇಂಡ್ಲವಾಡಿ ಮಾದೇಶ್, ಪಳ್ಳಳ್ಳಪ್ಪ ಯಾದವ್, ರವಿಕುಮಾರ್, ಕಾಳಿನಾಥ್, ಪದ್ಮನಾಬ್, ಬನನಹಳ್ಳಿ ಅಭಿ ಸೇರಿದಂತೆ ಹಲವರು ಉಪಸ್ಥಿತರಿದ್ದರು

Leave a Reply