ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪವಿರುವ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆ (ಐಐಎಚ್‌ಎಮ್‌ಆರ್) ಆಸ್ಪತ್ರೆ ನಿರ್ವಹಣೆ, ಆರೋಗ್ಯ, ಐಟಿ, ಔಷಧ ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ದೂರದೃಷ್ಟಿಯ ನಾಯಕರನ್ನು ರೂಪಿಸುವಲ್ಲಿ ಸಂಸ್ಥೆಯು ನಿರಂತರ ಬದ್ಧತೆಯನ್ನು ಒಳಗೊಂಡಿದೆ ಎಂದು ಐಐಎಚ್‌ಎಂಆರ್‌ನ ಬೆಂಗಳೂರು ನಿರ್ದೇಶಕಿ ಡಾ.ಉಷಾ ಮಂಜುನಾಥ್ ತಿಳಿಸಿದರು.
ಐಐಎಚ್‌ಎಂಆರ್‌ನ ೧ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಘಟಿಕೋತ್ಸವವು ಕೇವಲ ಶೈಕ್ಷಣಿಕ ಪ್ರಯತ್ನದ ಪರಾಕಷ್ಟೆಯನ್ನು ಸೂಚಿಸುವುದಿಲ್ಲ. ಬದಲಿಗೆ ಸಾಮರ್ಥ್ಯವುಳ್ಳ, ನೈತಿಕ ಮತ್ತು ಆವಿಷ್ಕಾರೀ ಚಿಂತನೆಯುವಳ್ಳ ನಾಯಕರನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದರು.
ಐಐಎಚ್‌ಎಮ್‌ಆರ್ ಸಂಸ್ಥೆಯ ವಿದ್ಯಾರ್ಥಿಗಳು ಜಾಗತಿಕ ಆರೋಗ್ಯ ವ್ಯವಸ್ಥೆಗಳಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವುದನ್ನು ಕಾಣಲು ನಾವು ಉತ್ಸುಕರಾಗಿದ್ದೇವೆ. ನಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಉದ್ಯಮದ ನಾಯಕರು ಸದಾ ಬೆನ್ನೆಲುಬಾಗಿರುತ್ತಾರೆ ಎಂದು ಅವರು ಹೇಳಿದರು.
ವೈದ್ಯರಿಗಾಗಿ ಮೊದಲ ಬಾರಿ ಎ1 ತರಬೇತಿ ಕಾರ್ಯಕ್ರಮದ ಆರಂಭಿದ್ದೇವೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ವೈದ್ಯರಲ್ಲಿ ನಿರ್ಣಾಯಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಇವೆಲ್ಲಾ ಆವಿಷ್ಕಾರಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಕ್ರಾಂತಿಕಾರಣ ಬದಲಾವಣೆಗಳು ಆಗಲಿವೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಐಐಎಚ್ ಎಂಆರ್ ನ ನಿರ್ವಹಣಾ ಮಂಡಳಿಯ ಅಧ್ಯಕ್ಷ ಡಾ.ಎಸ್.ಡಿ.ಗುಪ್ತಾ, ನಿಮ್ಜಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಹಾಗೂ ಹೆಲ್ತ್ ಕೇರ್ ಗ್ಲೋಬಲ್ ಅಧ್ಯಕ್ಷ ಡಾ.ಬಿ.ಎಸ್.ಅಜಯ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

