Breaking
24 May 2026, Sun

ಆನೇಕಲ್ ನಲ್ಲಿ ಅದ್ದೂರಿ‌ ಬಸವ ಜಯಂತಿ ಕಾರ್ಯಕ್ರಮ

ಮಹಾಮಂಡಳಿ ಟ್ರಸ್ಟ್ ಮತ್ತು ವೀರಶೈವ ಲಿಂಗಾಯಿತಿ ಬಂಧುಗಳ ವತಿಯಿಂದ ಆನೇಕಲ್ ನಲ್ಲಿ ಬಸವಣ್ಣರವರ ಜಯಂತಿಯನ್ನು ಅದ್ದೂರಿ ಆಚರಿಸಲಾಯಿತು. ಬಸವ ಜಯಂತಿ ಪ್ರಯುಕ್ತ ಪಟ್ಟಣದ ಪ್ರಮುಖ ಭೀದಿಗಳಲ್ಲಿ ಮಂಗಳವಾದ್ಯ, ವೀರಗಾಸೆ, ನಂದಿಧ್ವಜದೊಂದಿಗೆ ಅದ್ದೂರಿಯಾಗಿ ಮೆರವಣೆಯ ಮಾಡಿ ಗೌರವ ನಮನ ಸಲ್ಲಿಸಲಾಯಿತು.

ಇದೇ ವೇಳೆ ರಾಜಾಪುರ ಸಂಸ್ಥಾನ ಮಠದ ರಾಜೇಶ್ವರ ಶಿವಚಾರ್ಯ ಮಹಾಸ್ವಾಮೀಜಿ ಮಾತನಾಡಿ, ೧೨ನೇ ಶತಮಾನದಲ್ಲಿ ಕಾಯಕ ತತ್ವದ ಮೂಲಕ ಎಲ್ಲ ಜಾತಿ ಸಮುದಾಯಗಳನ್ನು ಒಂದು ವೇದಿಕೆಯಡಿ ತಂದಿದ್ದಾರೆ. ಸಮಾಜದ ಶಾಂತಿ ಸೌಹಾರ್ದತೆಗೆ ಬಸವಣ್ಣ ಚಿಂತನೆಗಳು ಎಂದೆAದಿಗೂ ಪ್ರಸ್ತುತವೆಂದು ತಿಳಿಸಿದರು.

ಸಮ ಸಮಾಜದ ತತ್ವದಡಿ ನಾವೆಲ್ಲರೂ ಸಾಗಿದಾಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ದಿಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಬಸವಣ್ಣ ಸೇರಿದಂತೆ ಎಲ್ಲ ವಚನಕಾರರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸುವುದೆಡೆಗೆ ಕೈಜೋಡಿಸೋಣವೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಗುಮ್ಮಳಪುರ ಸಂಸ್ಥಾನದ ಮಠದ ಶಿವಾನಂದ ಶಿವಚಾರ್ಯ ಸ್ವಾಮೀಜಿಗಳು, ಪುರಸಭೆ ಅಧ್ಯಕ್ಷೆ ಸುಧಾ ನಿರಂಜನ್, ವೀರಶೈವ ಮಹಾ ಮಂಡಳಿ ಟ್ರಸ್ಟ್ನ ಪದಾಧಿಕಾರಿಗಳಾದ ಕಿರಣ್ ಪ್ರಕಾಶ್, ಎಸ್‌ಆರ್‌ಎಸ್ ಚಂದ್ರಶೇಖರ್, ನಾಗಭೂಷಣ್, ಅಂಬರೀಶ್, ರಾಜಶೇಖರ ಪವಾಟೆ, ಟಿವಿ ರಾಜು, ಬಣ್ಣ ನಾಗರಾಜು, ಶಿವಕುಮಾರ್, ನಿತಿನ್, ಪುನೀತ್, ಹಿನ್ನಕ್ಕಿ ಜಯಣ್ಣ, ದೊಮ್ಮಸಂದ್ರ ಜಯಣ್ಣ, ಮಂಜುಳಾ ನೀಲಕಂಠಪ್ಪ, ಜಗದೀಶ್, ಚಂದ್ರಪ್ಪ ಮತ್ತಿತರರಿದ್ದರು.

Leave a Reply