Breaking
21 Nov 2024, Thu

ನಿರ್ಜನ ಪ್ರದೇಶದಲ್ಲಿ ಬಿದ್ದಿರುವ ಮೃತ ದೇಹ ಮತ್ತೊಂದೆಡೆ ಸ್ಥಳ ಪರಿಶೀಲನೆ ಮಾಡುತ್ತಿರುವ ಪೊಲೀಸರು ಹಾಗೂ ಎಫ್ ಎಸ ಎಲ್ ಅಧಿಕಾರಿಗಳು ಈ ದೃಶ್ಯ ನೋಡುತ್ತಿದ್ದರೆ ಖಂಡಿತವಾಗಲೂ ಎಲ್ಲಿ ಒಂದು ಕ್ರೈಂ ಸೀನ್ ನಡೆದಿದೆ ಎಂದು ಅರ್ಥವಾಗುತ್ತದೆ ಹೌದು ತಮಿಳುನಾಡಿನ ಅಳವರಾಜ್ ಶಿವಗಂಗೆ ಎಂಬ 31 ವರ್ಷದ ರೌಡಿಶೀಟರ್ ನನ್ನು ಬೇರೆಲ್ಲೂ ಕೊಲೆ ಮಾಡಿ ಅತ್ತಿಬೆಲೆ ಹಾಗೂ ಹೊಸೂರು ಗಡಿ ನಿರ್ಜನ ಪ್ರದೇಶದಲ್ಲಿ ಯಾರು ಕಿಡಿಗೇಡಿಗಳು ಬಂದು ಎಸೆದು ಹೋಗಿದ್ದಾರೆ ಇನ್ನು ಇಂದು ಬೆಳಗ್ಗೆ ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಸದ್ಯ ಕೊಲೆಗಾರರು ಯಾರು ಎಂಬ ವಿಚಾರ ತನಿಖೆ ಕೈಗೆತ್ತಿಕೊಂಡಿದ್ದಾರೆ… ಇನ್ನು ಮೃತ ವ್ಯಕ್ತಿ ತಮಿಳುನಾಡಿನ ತಿರುಪಾಚಿ ಪೊಲೀಸ್ ಠಾಣೆಯ ರೌಡಿಶೀಟರ್ ಎಂದು ತಿಳಿದುಬಂದಿದ್ದು ಸದ್ಯ ಎಪಿಎಸ್ಎಲ್ ತಂಡ ಸಹ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಕಲೆಹಾಕಿದೆ ಬೇರೆ ಸ್ಥಳದಲ್ಲಿ ಕೊಲೆ ಮಾಡಿ ಇಲ್ಲಿ ತೆಗೆದುಕೊಂಡು ಬಂದು ಎಸೆದು ಹೋಗಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಮೃತ ದೇಹವನ್ನು ಸದ್ಯ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ… ಮೃತ ವ್ಯಕ್ತಿ ತಮಿಳುನಾಡಿನವನಾಗಿದ್ದು ಹಳೆ ವೈಷಮ್ಯ ಕೊಲೆಗೆ ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ
ಅತ್ತಿಬೆಲೆ ಪೊಲೀಸರು ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದ್ದು ಆರೋಪಿಗಳನ್ನು ಆದಷ್ಟು ಬೇಗ ಬಂದಿಸಲಿ ಎಂಬುದೇ ನಮ್ಮ ಆಶಯವಾಗಿದೆ

Leave a Reply

Your email address will not be published. Required fields are marked *