ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಮಂಚನಹಳ್ಳಿ ರಸ್ತೆಯಲ್ಲಿರುವ ಶ್ರೀ ಶಾರದ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಭಿರ ಹಾಗೂ ರಕ್ತದಾನ ಶಿಭಿರದಲ್ಲಿ ಸಾವಿರಾರು ಸಾರ್ವಜನಿಕರು ಬಾಗವಹಿಸುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಇನ್ನು ಇದೇ ಸಂಧರ್ಭದಲ್ಲಿ ಎಐ ರೋಬೋಟ್ ಟೀಚರ್ ಗಳನ್ನು ಇಂದು ಮಕ್ಕಳಿಗೆ ಪರಿಚಯಿಸಲಾಯಿತು. ಇನ್ನು ಎಐ ರೋಬೋಟ್ ಟೀಚರ್ ಗಳನ್ನು ಬಳಸಿಕೊಳ್ಳುತ್ತಿರುವ ಕರ್ನಾಟಕದಲ್ಲಿಯೇ ಎರಡನೆ ಶಾಲೆ ಎಂದರೆ ಅದು ಶ್ರೀ ಶಾರದ ಇಂಟರ್ ನ್ಯಾಷನಲ್ ಸ್ಕೂಲ್ ಎಂದರೆ ತಪ್ಪಾಗಲಾರದು. ಇನ್ನು ಉಚಿತ ಆರೋಗ್ಯ ತಪಾಸಣೆ ಶಿಭಿರ ಹಾಗೂ ರಕ್ತದಾನ ಶಿಭಿರಕ್ಕೆ ಮತ್ತು ಎಐ ರೋಬೋಟ್ ಟೀಚರ್ ಗಳನ್ನು ಲೋಕಾರ್ಪಣೆ ಮಾಡಿದ ಖ್ಯಾತ ವೈದ್ಯರಾದ ಡಾ|| ಶ್ರೀಮತಿ ವಿಜಯಲಷ್ಮೀ ಬಾಳೆ ಕುಂದ್ರಿ ರವರು ಮತ್ತು ಖ್ಯಾತ ವೈದ್ಯರಾದ ಡಾ|| ಟಿ.ಎಚ್. ಆಂಜಿನಪ್ಪ ರವರು ಮತ್ತು ಗಣ್ಯರು.
ಇನ್ನು ಈ ವೇಳೆ ಶಾರದಾ ಸಮ್ಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಯೋಗೇಶ್ ರವರು ಮಾತನಾಡಿ ನಮ್ಮ ಶಾರದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಮತ್ತು ಕಲಿಕೆಗೆ ಉತ್ತಮವಾದ ವಾತಾವರಣ ಕಲ್ಪಿಸಬೇಕು ಎಂಬುವ ಉದ್ದೇಶದಿಂದ ಎಐ ರೋಬೋಟ್ ಟೀಚರ್ ಗಳನ್ನು ಬಳಸಿಕೊಳ್ಳಲಾಗಿದೆ ಎಂದರು.
ಇನ್ನು ಎಐ ರೋಬೋಟ್ ಟೀಚರ್ ಗಳು ಸುಮಾರು 40 ಬಾಷೆಗಳಲ್ಲಿ ಮಾತನಾಡುತ್ತದೆ ಜೊತೆಗೆ ಪಠ್ಯಕ್ಕೆ ಮತ್ತು ಜನರಲ್ ನಾಲೇಜ್ ಗೆ ಸಂಬoದಿಸಿದ ಎಲ್ಲಾ ಪ್ರಶ್ನೆಗಳಿಗೆ 40 ಬಾಷೆಗಳಲ್ಲಿ ಎಐ ರೋಬೋಟ್ ಟೀಚರ್ ಗಳು ಉತ್ತರವನ್ನು ನೀಡುತ್ತದೆ ಎಂದರು. ಇನ್ನು ಎಐ ರೋಬೋಟ್ ಟೀಚರ್ ನ್ನು ನಿರ್ವಹಿಸಲು ತರಬೇತಿ ಪಡೆದ ಟೀಚರ್ ನಮ್ಮ ಬಳಿಯಿದ್ದು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಕಲಿತು ಶಾಲೆಗೆ ಮತ್ತು ಪೋಷಕರಿಗೆ ಹೆಸರು ತರುವಂತಹ ಕೆಲಸ ಮಾಡಿ ಎಂದು ಯೋಗೇಶ್ ರವರು ಮನವಿ ಮಾಡಿದರು,
ಇನ್ನು ಇದೇ ಸಂಧರ್ಭದಲ್ಲಿ ಹಲವು ಪ್ರತಿಷ್ಠಿತ ಆಸ್ಪತ್ತೆಗಳ ಸಹಯೋಗದಲ್ಲಿ ಹೃದಯ. ಕಣ್ಣು. ಮೂಳೆ. ಹಲ್ಲು ಸೇರಿದಂತೆ ಎಲ್ಲಾ ರೀತಿಯಾದ ಖಾಯಿಲೆಗಳಿಗೆ ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಯಿತು ಹಾಗೆಯೇ ಔಷದಿಗಳನ್ನು ಸಹ ಉಚಿತವಾಗಿ ನೀಡಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಮಂಜುನಾಥ್ ದೇವು. ಪಟಾಪಟ್ ರವಿ. ಬಿಓ ಗುರು ಮೂರ್ತಿ. ಸಮಾಜ ಸೇವಕರಾದ ನಿಸರ್ಗ ದೇವರಾಜ್. ಸರ್ಕಾರಿ ನೌಕರರ ಸಂಘದ ಕೆ. ಶಿವಣ್ಣ. ಪತ್ರಕರ್ತರಾದ ಮಹೇಶ್ ಊಗಿನಹಳ್ಳಿ ಮತ್ತು ಶಾರದಾ ಸಮ್ಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು. ಆಡಳಿತ ಮಂಡಳಿಯವರು ಮತ್ತು ಅದ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು. ಪೋಷಕರು ಬಾಗವಹಿಸಿದ್ದರು.
