Breaking
31 Oct 2025, Fri

ಕೊಡತಿ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ

ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಡತಿ
ಗ್ರಾಮ ಪಂಚಾಯಿತಿ ಅನುದಾನಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯತಿ ಕಟ್ಟಡವನ್ನು ಪಕ್ಷ ಭೇದವಿಲ್ಲದೆ ಎಲ್ಲಾ ಸದಸ್ಯರೊಂದಿಗೆ ಗ್ರಾಮ ಪಂಚಾಯಿತಿ ಪ್ರಬಾರ ಅಧ್ಯಕ್ಷ ಮಂಜುನಾಥ್, ಉದ್ಘಾಟಿಸಿದರು.

ಸರ್ಜಾಪುರ ಮುಖ್ಯ ರಸ್ತೆ ವಿಪ್ರೋ ಸಮೀಪ ಸರ್ಕಾರಿ ಜಾಗವನ್ನು ಒತ್ತುವರಿದಾರರಿಂದ ತೆರವುಗೊಳಿಸಿ
ಗ್ರಾಮ ಪಂಚಾಯತಿಯ‌ 2 ಕೋಟಿ ಅನುದಾನದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಗ್ರಾ.ಪಂ ಪ್ರಭಾರ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

ಎರಡು ಎಕರೆಯ ಜಾಗದಲ್ಲಿ ಐದು ಸಾವಿರ ಚದರ ಅಡಿಯ ಎರಡು ಮಹಡಿ ವಿಂಗಡಣೆ ಮಾಡಿ ಸುಸುಶ್ಚಿತವಾದ ಕಟ್ಟಡ ನಿರ್ಮಾಣ ಮಾಡಿ ಹೈಟೆಕ್ ಪಂಚಾಯಿತಿ ನಿರ್ಮಿಸಿ ಸಾರ್ವಜನಿಕರಿಗೆ ಮುಕ್ತವಾಗಿ ವ್ಯವಹರಿಸಲು ಎಲ್ಲಾ ಪಂಚಾಯಿತಿ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ಕೈಜೋಡಿಸಿ ನಿರ್ಮಿಸಿದ್ದಾರೆ.

ಪಂಚಾಯಿತಿಯಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗಳುಗೆ ತಲ ಒಬ್ಬರಿಗೆ 25 ಕೆಜಿ ಅಕ್ಕಿ ಮೂಟೆಯನ್ನು ಕೊಡಲಾಗಿದ್ದು ಗಂಡಸರುಗೆ ಒಂದು ಜೊತೆ ಪ್ಯಾಂಟ್ ಶರ್ಟ್ ಹೆಂಗಸರು ಸೀರೆ ಹಾಗೂ ಎಲ್ಲಾ ಸಿಬ್ಬಂದಿಗೆ ಶಾಲು ಹಾರ ಹಾಕಿ ನೆನಪಿನ ಕಾಣಿಕೆ ಕೊಟ್ಟು ಸತ್ಕಾರಿಸಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಶಕ್ತಗೊಳಿಸಬೇಕೆಂಬ ನಿಟ್ಟಿನಲ್ಲಿ ವಿಶೇಷ ಚೇತನರಿಗೂ ಜೀವನಕ್ಕೆ ಆಧಾರವಾಗಲು
ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ನೂತನ ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿ ದಾಸ್ತಾನು ಕಟ್ಟಡ, ಮುಂಭಾಗದಲ್ಲಿ
ಗ್ರಾಮ ಲೆಕ್ಕಿಗರ ಕಚೇರಿಯ ಕಟ್ಟಡವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್ ನಾಗೇಶ್ ಕೊಡತಿ ಗ್ರಾ.ಪಂ ಮಾಜಿ ಅಧ್ಯಕ್ಷೇ ಕೃಷ್ಣಾವೇಣಿ, ಸದಸ್ಯರಾದ ನಾರಾಯಣ ಸ್ವಾಮಿ (ಬಾಬು), ಸತೀಶ್,ಎಂ, ಕೆ,ಎನ್,ಬಾಬುರೆಡ್ಡಿ, ಮುಖಂಡರಾದ ಸದಾಶಿವರೆಡ್ಡಿ, ಕಾಂಗ್ರೆಸ್ ಮುಖಂಡರು ಸುನೀಲ್, ಪಿಡಿಓ ಮುರಳೀಧರ,ಪಿ ಕಾರ್ಯದರ್ಶಿ ನಾಗರಾಜ ನಾಯಕ. ಸದಸ್ಯರು ಎಸ್,ಕೆ, ರಮೇಶ್, ಸಿ, ಶಿವಕುಮಾರ್, ಆಶಾ ಚಿಟ್ಟಿಬಾಬು, ಸೋಮಶೇಖರ್, ಮುನಿರಾಜು,ವಿ,ಕೆ, ಅಂತೋನಿಮೇರಿ, ನಂಜುಂಡ ರೆಡ್ಡಿ, ಶುಭ, ಮಮತಾ, ನಳಿನಾಕ್ಷಿ, ಮತ್ತಿತರರು ಹಾಜರಿದ್ದರು.

Leave a Reply