Breaking
20 Sep 2026, Sun

ಹಾರಗದ್ದೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾರಗದ್ದೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಶಾಸಕರಾದ ಎಂ ಕೃಷ್ಣಪ್ಪ ಹಾಗೂ ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ ರೆಡ್ಡಿ ಇಂದು ಉದ್ಘಾಟನೆ ಮಾಡಿದರು.

ಹಾರಗದ್ದೆ ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡ ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಹಾರಗದ್ದೆಯ ಮೈಲ್ ಸ್ಟೋನ್ ಬಡಾವಣೆಯಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಗ್ರಾಮ ಪಂಚಾಯಿತಿಯ ಕಟ್ಟಡವನ್ನು ನಿರ್ಮಿಸಿ ಇಂದು ಲೋಕಾರ್ಪಣೆ ಮಾಡಲಾಯಿತು

ಈ ಕುರಿತು ಮಾತನಾಡಿದ ಶಾಸಕ ಕೃಷ್ಣಪ್ಪ ರಸ್ತೆ ಅಗಲೀಕರಣ ಸಮಯದಲ್ಲಿ ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡ ಜಾಗವನ್ನ ಬಳಸಿಕೊಂಡು ಗ್ರಾಮ ಪಂಚಾಯಿತಿ ಕಟ್ಟಡ ತುಂಬಾ ಚಿಕ್ಕದಾಗಿತ್ತು. ಸಭೆ ಸಮಾರಂಭ ನಡೆಸಲು ಸಭಾಂಗಣದ ಕೊರತೆ ಇದ್ದ ಹಿನ್ನೆಲೆಯಲ್ಲಿ ಅತ್ಯಾಧುನಿಕವಾಗಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಿ ಇಂದು ಉದ್ಘಾಟನೆ ಮಾಡಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ ರೆಡ್ಡಿ, ಆನೇಕಲ್ ಶಾಸಕ ಶಿವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮಾ ರಾಮಸ್ವಾಮಿ, ಉಪಾಧ್ಯಕ್ಷರಾದ ಇಂದಿರಾ ಶಿವಕುಮಾರ್, ಪಂಚಾಯತಿ ಸದಸ್ಯರು ಮತ್ತು ಹಿರಿಯ ಮುಖಂಡರಾದ ಹಾರಗದ್ದೆ ನಟರಾಜ್‌, ನೊಸೆನೂರು ರಾಜಶೇಖ‌ರ್ ರೆಡ್ಡಿ , ಪಿ.ಎಲ್‌.ಡಿ. ವೆಂಕಟೇಶ್ ಗೌಡ. ಶ್ರೀಮತಿ ಕಾವ್ಯ ಪ್ರಭಾಕರ್, ಕೆ.ರಾಜೇಶ್ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿ ರಂಗಯ್ಯ ಮತ್ತು ಸ್ಥಳೀಯ ಮುಖಂಡರು. ಪಂಚಾಯತಿ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಭಾಗವಹಿಸಿದ್ದರು.

Leave a Reply