ಆನೇಕಲ್ ತಾಲೂಕಿನ ಶೆಟ್ಟಿಹಳ್ಳಿ – ಮಾಯಸಂದ್ರ ಮುಖ್ಯ ರಸ್ತೆಯಲ್ಲಿ ಮನೆ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಬುದುವಾರ ಬೆಳಗಿನ ಜಾವ 2 ಗಂಟೆಗೆ ಘಟನೆ ನಡೆದಿದ್ದು ಮೂವರು ಕಳ್ಳರು ಮುಸುಕು ಧರಿಸಿ ಬಂದು ಹೋಂಡಾ ಆಕ್ಟಿವಾ ಗಾಡಿಯನ್ನು ಕದ್ದು ಪರಾರಿಯಾಗಿದ್ದಾರೆ. ಮೊದಲು ಹೊರಭಾಗದ ಡೊರ್ ಲಾಕ್ ಮಾಡಿ ಬಳಿಕ ಗಾಡಿಯನ್ನು ಕದ್ದು ಪರಾರಿಯಾಗಿದ್ದು ಕಳ್ಳರ ಕೈಚಳಕ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ

