Breaking
20 Sep 2026, Sun

ಬೆಸ್ತಮಾನಹಳ್ಳಿಯಲ್ಲಿ ಲುಂಗಿ ಧರಿಸಿ ಬಂದು ಮೂವರು ಕಳ್ಳರಿಂದ ಕಳ್ಳತನಕ್ಕೆ ಯತ್ನ, ಸಿಸಿ ಕ್ಯಾಮೆರಾದಲ್ಲಿ ಸೆರೆ

ಆನೇಕಲ್ ತಾಲೂಕಿನ ಬೆಸಮಾನಹಳ್ಳಿ ಗ್ರಾಮದಲ್ಲಿ ಲುಂಗಿ ಧರಿಸಿ ಕಳ್ಳತನಕ್ಕೆ ಬಂದಿದ್ದ ಕಳ್ಳರ ಗುಂಪು ಸಿಸಿ ಕ್ಯಾಮೆರಾ ನೋಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಸಮಾನಹಳ್ಳಿ ಗ್ರಾಮದ ನಿವಾಸಿ ದಿಲೀಪ್‌ ಎಂಬುವರ ಮನೆ ಮುಂಭಾಗ ಕಳ್ಳರು ಲುಂಗಿ ಹೊದ್ದಿಕೊಂಡು ಕಳ್ಳತನಕ್ಕೆ ಹೊಂಚು ಹಾಕಿದ್ದರು. ಆದರೆ ಸಿಸಿ ಕ್ಯಾಮೆರಾ ನೋಡಿದ ಬಳಿಕ ಮೂವರು ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a Reply