ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಉಪನಗರದಲ್ಲಿ ಆನ್ ಲೈನ್ ಜೂಜಿನ ದುಷ್ಪರಿಣಾಮಗಳ ಕುರಿತು ಬೃಹತ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕ ಸೋಮಶೇಖರ್ ಕಾಲ್ನಡಿಗೆ ಜಾಥಗೆ ಚಾಲನೆ ನೀಡಿದರು, ಸ್ವಾಭಿಮಾನಿ ಮಹಿಳಾ ಟ್ರಸ್ಟ್ ಹಾಗೂ ಕೆಂಗೇರಿ ಪತ್ರಕರ್ತರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂರಾರು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಆನ್ ಲೈನ್ ಜೂಜು ವಿರೋಧಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಯುವ ಸಮುದಾಯ ಇತ್ತೀಚೆಗೆ ಆನ್ ಲೈನ್ ಜೂಜಿನ ದಾಸರಾಗುತ್ತಿದ್ದು ತಮ್ಮ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರಲ್ಲಿ ಜೂಜಿನ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು
ಕೆಂಗೇರಿ ಉಪನಗರದಲ್ಲಿ ಆನ್‌ಲೈನ್ ಜೂಜಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಜಾಥಗೆ ಶಾಸಕ ಸೋಮಶೇಖರ್ ಚಾಲನೆ

