Breaking
20 Sep 2026, Sun

ಯಾರಂಡಹಳ್ಳಿಯಲ್ಲಿ ಮದ್ಯದ ಜೊತೆ ಡ್ರಗ್ಸ್ ಪಾರ್ಟಿ, ಇಬ್ಬರು ಯುವಕರು ದುರ್ಮರಣ

ಮಧ್ಯದ ಅಮಲಿನಲ್ಲಿ ಡ್ರಗ್ ಸೇವನೆ ಮಾಡಿದ ಪರಿಣಾಮ ಇಬ್ಬರು ಯುವಕರು ಧಾರಣವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣ ವ್ಯಾಪ್ತಿಯ ಯಾರಂಡಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ. ಅಸ್ಸಾಂ ಮೂಲದ ದಿನಾವ್ ಅಫ್ರಿದಿ ಹಾಗೂ ಅಶ್ರಫ್ ಆಲಿ ಸಾವನ್ನಪ್ಪಿರುವ ಯುವಕರು. ಸ್ನೇಹಿತರ ಜೊತೆ ಮಧ್ಯ ಸೇವನೆ ಮಾಡಿದ ಬಳಿಕ ಡ್ರಗ್ ಸೇವನೆ ಮಾಡಿದ್ದಾರೆ. ಇದರಿಂದ ಡ್ರಗ್ ಓವರ್ ಡೋಸ್ ಆಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಮೃತ ದೇಹದ ಪಕ್ಕದಲ್ಲೇ ಮಧ್ಯದ ಬಾಟಲ್ ಹಾಗೂ ಡ್ರಗ್ಸ್ ಇಂಜೆಕ್ಷನ್ ಗಳು ಪತ್ತೆಯಾಗಿದೆ. ತಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply