Breaking
31 Oct 2025, Fri

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ, 25ಕ್ಕೂ ಹೆಚ್ಚು ನರೇಗಾ ಕಾರ್ಮಿಕರು ಆಸ್ಪತ್ರೆಗೆ ದಾಖಲು

ನರೇಗಾ ಕಾರ್ಮಿಕರನ್ನು ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾದ ಭೀಕರ ರಸ್ತೆ ಅಪಘಾತ ಹುಕ್ಕೇರಿ ತಾಲೂಕಿನ ಹೊಸುರ ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಗೂಡ್ಸ್ ವಾಹನದಲ್ಲಿ 25ಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನು ತುಂಬಿಕೊಂಡು ನರೇಗಾ ಕೆಲಸಕ್ಕೆ ಹೋಗಲಾಗುತ್ತಿತ್ತು. ಯಮಕನಮರಡಿ ಗ್ರಾಮದಿಂದ ಹಿಡಕಲ್ ಡ್ಯಾಮ್‌ಗೆ ನರೇಗಾ ಕೆಲಸಕ್ಕೆ ಕೂಲಿ ಕಾರ್ಮಿಕರು ಹೊರಟಿದ್ದರು. ಅಡ್ಡ ಬಂದ ಬುಲೆಟ್ ವಾಹನವನ್ನು ತಪ್ಪಿಸಲು ಹೋಗಿ ಗೂಡ್ಸ್ ಗಾಡಿಯ ಚಾಲಕ ನಿಯಂತ್ರಣ ತಪ್ಪಿದ್ದಾನೆ. ಗೂಡ್ಸ್ ವಾಹನ ಪಲ್ಟಿಯಾಗಿದ್ದು, ಕೆಲ ಕೂಲಿ ಕಾರ್ಮಿಕರ ಕೈ, ಕಾಲು ಮುರಿದಿದೆ.
25ಕ್ಕೂ ಹೆಚ್ಚು ನರೇಗಾ ಕೂಲಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನ ಬಿಮ್ಸ್ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Leave a Reply