Breaking
20 Sep 2026, Sun

ಬೆಂಗಳೂರಿನ ಕಳ್ಳ ಸ್ವಾಮಿ ಬಂಧನ, ಮಾಟಮಂತ್ರ ಮಾಡಿಸಿದ್ದಾರೆಂದು ಪೂಜೆ ನೆಪದಲ್ಲಿ ಮನೆ ಕಳ್ಳತನ.

ಬೆಂಗಳೂರಿನಲ್ಲಿ ಮಾಟಮಂತ್ರದ ನೆಪದಲ್ಲಿ ಪೂಜೆ ಮಾಡುವ ವೇಷದಲ್ಲಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ವೆಂಕಟರಮಣನಿಂದ 8.5 ಲಕ್ಷ ರೂ. ಮೌಲ್ಯದ 115 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಷ್ಟೇ ದುಡಿದರೂ ತಾವು ಆರ್ಥಿಕವಾಗಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿಲ್ಲ, ಮಕ್ಕಳ ಶಿಕ್ಷಣ ಉನ್ನತ ಮಟ್ಟಕ್ಕೆ ತಲುಪುತ್ತಿಲ್ಲ, ಮನೆಯವರಿಗೆ ಆಗಾಗ್ಗೆ ಅನಾರೋಗ್ಯ ಕಾಡುತ್ತಿದೆ ಅಲ್ವಾ? ಹಾಗಾದರೆ ನಿಮ್ಮ ಮನೆಗೆ ಯಾರೋ ಮಾಟಮಂತ್ರ ಮಾಡಿಸಿದ್ದಾರೆ. ನಿಮ್ಮ ಮನೆಯಲ್ಲಿ ಪೂಜೆ ಮಾಡಬೇಕು ಎಂದು ಪೂಜೆಗೆ ಬಂದವನು ಎಲ್ಲರಿಗೂ ಮಂಕುಬೂದಿ ಎರಚಿ ಮನೆಯಲ್ಲಿದ್ದ ಎಲ್ಲ ಹಣ ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು ಹೋಗುತ್ತಿದ್ದ ಕಳ್ಳಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply