Breaking
20 Sep 2026, Sun

ವರದಕ್ಷಿಣೆ ಕಿರುಕುಳದಿಂದ ಮನನೊಂದು ಮಹಿಳೆ ನೇಣುಬಿಗಿದು ಆತ್ಮಹತ್ಯೆ

ಎರಡು ವರ್ಷದ ಹಿಂದೆ ಧನ್ಯಶ್ರೀ ಹಾಗೂ ಪ್ರೇಮಕುಮಾರ್ ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಒಂದು ವರ್ಷದಿಂದ ಪ್ರೇಮ್‌ಕುಮಾ‌ರ್ ಆಕೆಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ತವರು ಮನೆಗೆ ಹೋಗಿದ್ದ ಧನ್ಯಶ್ರೀ ಭಾನುವಾರ ಅತ್ತೆ ಮನೆಗೆ ವಾಪಸ್ ಬಂದಿದ್ದಳು. ಆ ವೇಳೆ ಯಾಕೆ ವರದಕ್ಷಿಣೆ ತಂದಿಲ್ಲ ಎಂದು ಜಗಳ ಮಾಡಿ ಆಕೆಯ ಮೇಲೆ ಹಲ್ಲೆ ಮಾಡಿದ್ದ.ಮೃತ ಮಹಿಳೆಯನ್ನು ಮೂಲತಃ ಸಕಲೇಶಪುರ ತಾಲೂಕಿನ ಬ್ಯಾಕೆರೆಗಡಿ ಗ್ರಾಮದ ಧನ್ಯಶ್ರೀ (20) ಎಂದು ಗುರುತಿಸಲಾಗಿದೆ.ಇದೇ ಸಮಯದಲ್ಲಿ ಪತಿಯೊಂದಿಗೆ ಅತ್ತೆ ಭವಾನಿ, ಮಾವ ಪ್ರದೀಪ್ ಕೂಡ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಮನನೊಂದ ಮಹಿಳೆ ಸೋಮವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Leave a Reply