Breaking
20 Sep 2026, Sun

ಕಿತ್ತಗಾನಹಳ್ಳಿಯಲ್ಲಿ ಡ್ರಾಪ್ ನೀಡುವ ನೆಪದಲ್ಲಿ ವೃದ್ಧನ ಮೇಲೆ ಹಲ್ಲೆ ನಡೆಸಿ ರಾಬರಿ, ಚಿನ್ನಾಭರಣ ಕದ್ದು ಪರಾರಿಯಾದ ಕಿರಾತಕರು.

ವಯೋವೃದ್ಧರೊಬ್ಬರಿಗೆ ಆಟೋ ದಲ್ಲಿ ಡ್ರಾಪ್ ನೀಡುವುದಾಗಿ ಹೇಳಿ ಹತ್ತಿಸಿಕೊಂಡ ಕಿರಾತಕರು ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಿನ್ನಾಭರಣವನ್ನು ಕದ್ದುಪರಾರಿಯಾಗಿದ್ದಾರೆ. ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿ ಗ್ರಾಮದಲ್ಲಿ ಇಂದು ಘಟನೆ ನಡೆದಿದೆ. ಕಾಚನಾಯಕನಹಳ್ಳಿ ವಾಸಿ 68 ವರ್ಷದ ನಾಗರಾಜು ಚಿನ್ನಾಭರಣವನ್ನು ಕಳೆದುಕೊಂಡ ವಯೋವೃದ್ದ. ಇತನನ್ನು ಆಟೋದಲ್ಲಿ ಡ್ರಾಪ್‌ ನೀಡುವುದಾಗಿ ಹತ್ತಿಸಿಕೊಂಡ ಇಬ್ಬರೂ ಕಿರಾತಕರು ನಿರ್ಜನ ಪ್ರದೇಶಕ್ಕೆ ಕರೆತಂದು ಅವರ ಮೇಲೆ ಹಲ್ಲೆ ಮಾಡಿ ಚಿನ್ನದ ಸರ ಹಾಗೂ ಉಂಗುರ ಕದ್ದುಪರಾರಿಯಾಗಿದ್ದಾರೆ.

ಈ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply