Breaking
20 Sep 2026, Sun

ಆನೇಕಲ್ ಪಟ್ಟಣದ ತಾ.ಪಂ ಆವರಣದಲ್ಲಿ ಅಂಬೇಡ್ಕ‌ರ್ ಪುತ್ಥಳಿ ಲೋಕಾರ್ಪಣೆ, ಶಾಸಕ ಶಿವಣ್ಣ ಭಾಗಿ

ಆನೇಕಲ್ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ನಿರ್ಮಾಣವಾಗಿರುವ ಬೃಹತ್ ಅಂಬೇಡ್ಕರ್ ಪುತ್ತಳಿಯನ್ನ ಶಾಸಕ ಶಿವಣ್ಣ ಉದ್ಘಾಟಿಸಿದರು. ತಾಲೂಕಿನ ವಿವಿಧ ಗ್ರಾಮಗಳ ದಲಿತ ಹೋರಾಟಗಾರರು ಹಾಗೂ ಸಾರ್ವಜನಿಕರು ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂಬೇಡ್ಕರ್ ತತ್ವ ಆದರ್ಶಗಳು ಇಂದಿನ ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿದೆ ಎಂದು ಶಾಸಕ ಶಿವಣ್ಣ ತಿಳಿಸಿದರು. ಮರಸೂರು ಕೃಷ್ಣಪ್ಪ ನೇತೃತ್ವದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಚಿಸಲಾಗಿತ್ತು.

Leave a Reply