Breaking
20 Sep 2026, Sun

ಮುಗಳೂರಿನಲ್ಲಿ ಬೇಟೆ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ, ಸಾವಿರಾರು ಭಕ್ತರು ಭಾಗಿ

ಆನೇಕಲ್ ತಾಲೂಕಿನ ಮುಗಳೂರು ಗ್ರಾಮದ ಐತಿಹಾಸಿಕ ಶ್ರೀ ಬೇಟೆ ವೆಂಕಟೇಶ್ವರ ಸ್ವಾಮಿಯ ಅದ್ದೂರಿ ಬ್ರಹ್ಮರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ದೇವರ ಅಲಂಕೃತ ಮೂರ್ತಿಯನ್ನು ರಥದಲ್ಲಿ ಕೂರಿಸಿ ಊರಿನ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ಭಕ್ತಾದಿಗಳು ರಥವನ್ನು ಎಳೆದು ತಮ್ಮ ಕೋರಿಕೆಗಳನ್ನ ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ಬಂದಿದ್ದ ಸಾವಿರಾರು ಭಕ್ತಾದಿಗಳಿಗೆ ಸ್ಥಳೀಯರಿಂದ ಅನ್ನದಾಸೋಹ ಹಾಗೂ ಪಾನಕ, ಮಜ್ಜಿಗೆ ವಿತರಣೆ ಮಾಡಲಾಯಿತು.

Leave a Reply