Breaking
20 Sep 2026, Sun

3ನೇ ಮಹಡಿಯಿಂದ ಜಿಗಿದು ಆಕಾಶ್ ರೆಡ್ಡಿ ಎಂಬ ವಿದ್ಯಾರ್ಥಿ ಸಾವು

ಈಗಿನ ಜನರೇಷನ್ ಮಕ್ಕಳು ಅದೆಷ್ಟು ವೀಕ್ ಎಂದರೆ ಸಣ್ಣ ವಿಷ್ಯಕ್ಕೂ ಸಾವಿನ ಹಾದಿ ಹಿಡಿಯುತ್ತಾರೆ. ಇದಕ್ಕೆ ಸೋಶಿಯಲ್ ಮೀಡಿಯಾ ಕಾರಣವೋ, ಮನೆಯವರ ಒತ್ತಡ ಕಾರಣವೋ ಎಂಬುದು ಹೇಳಲು ಆಗುವುದಿಲ್ಲ. ಈಗ ಅದೇ ರೀತಿ ವಿದ್ಯಾರ್ಥಿಯೋರ್ವ ಸಾವಿನ ಹಾದಿ ಹಿಡಿದಿದ್ದಾನೆ.

ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್. ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಇದು ಒಂದು. ಇದೇ ಕಾಲೇಜಿನಲ್ಲಿ ದುರಂತವೊಂದು ನಡೆದುಹೋಗಿದೆ. ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ.

ಹೆಸರು ಆಕಾಶ್ ರೆಡ್ಡಿ. ಇದೇ ಕಾಲೇಜಿನಲ್ಲಿ ಇಂಜನಿಯರಿಂಗ್ 7ನೇ ಸೆಮಿಸ್ಟರ್‌ ಓದುತ್ತಿದ್ದ. ಕಾಲೇಜಿನ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಅದು ಓದಿನ ವಿಚಾರಕ್ಕೆ. ಆಕಾಶ್ ರೆಡ್ಡಿಗೆ ಎಕ್ಸಾಂನಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಹನುಮಂತ ನಗರ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು.

ಮಗನ ಬಗ್ಗೆ ಅದೆಷ್ಟು ಈ ತಾಯಿ ಕನಸು ಕಂಡಿದ್ರೋ ಗೊತ್ತಿಲ್ಲ. ಮುಪ್ಪಿನ ಕಾಲದಲ್ಲಿ ಆಧಾರವಾಗ್ತಾನೆ ಅಂದುಕೊಂಡಿದ್ದ ಮಗ ಮುಂದೆದೂ ಬಾರದ ಲೋಕಕ್ಕೆ ಹೋಗಿದ್ದಾನೆ. ಮಗನನ್ನು ಕಳ್ಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply