ಆನೇಕಲ್ ತಾಲ್ಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಶ್ರೀಮತಿ ಮಂಜುಳ ಮಂಜುನಾಥ್ ರವರು ಅವಿರೋಧವಾಗಿ ಆಯ್ಕೆಗೊಂಡರು. ಇನ್ನು ಇದೇ ಸಂಧರ್ಭದಲ್ಲಿ ಮಾಯಸಂದ್ರ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರುಗಳು ಹಾಗೂ ಅಭಿಮಾನಿಗಳು ಮಾಯಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ ಮಂಜುನಾಥ್ ರವರಿಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಸಿಹಿ ಹಂಚಿ ಶುಭ ಕೋರಿದರು.
ಇನ್ನು ಈ ವೇಳೆ ಮಾಯಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀ ಮಂಜುಳ ಮಂಜುನಾಥ್ ರವರು ಮಾತನಾಡಿ ಮಾಯಸಂದ್ರ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು ಮತ್ತು ಸ್ಥಳೀಯ ಮುಖಂಡರುಗಳು ನನ್ನ ಮೇಲೆ ವಿಶ್ವಾಸವನ್ನು ಇಟ್ಟು ಒಮ್ಮತದಿಂದ ನನ್ನನ್ನು ಮಾಯಸಂದ್ರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಮಾಯಸಂದ್ರ ಗ್ರಾಮ ಪಂಚಾಯಿತಿಯನ್ನು ಅಭಿವೃದ್ದಿ ಪಡಿಸುವ ಮೂಲಕ ನಿಮ್ಮ ಋಣವನ್ನು ತೀರಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಎ.ಪ್ರಸಾದ್. ಎವಿ.ಚಲಪತಿ. ಮಾಯಸಂದ್ರ ಪ್ರವೀಣ್. ಮಂಚನಹಳ್ಳಿ ನಾಗರಾಜ್. ಮೇಡಹಳ್ಳಿ ಹರೀಶ್. ಅಶೋಕ್ ಮಹಾರಾಜ್. ಸುಬ್ರಮಣಿ. ಭುವನ ಮಂಜುನಾಥ್. ಮಾಜಿ ರವಿ. ನಾರಾಯಣಪ್ಪ. ಎಂ.ಆರ್.ಎಸ್ ರಮೇಶ್ ಮತ್ತು ಮಾಯಸಂದ್ರ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರುಗಳು ಹಾಜರಿದ್ದರು.