Breaking
18 Sep 2026, Fri

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜೀಬ್ರಾ ಸಾವು

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಾವ್ಯ ಹೆಸರಿನ ಹೆಣ್ಣು ಜಿಬ್ರಾ ಇಂದು ಸಾವನ್ನಪ್ಪಿದೆ. ಜೈವಿಕ ಉದ್ಯಾನವನದ ಪಂಜರದಲ್ಲಿ ಚೈನ್ ಲಿಂಕ್ ಜಾಲಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜೀಬ್ರಾ ಸಾವನ್ನಪ್ಪಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಗಂಡು ಜಿಬ್ರಾಗಳ ಆಂತರಿಕ ಕದನ ಹಾಗೂ ಕಾಡಿನ ನರಭಕ್ಷಕ ಪ್ರಾಣಿಗಳ ಪ್ರವೇಶದಿಂದ ಒತ್ತಡ ಉಂಟಾಗಿ ಹೆಣ್ಣು ಜಿಬ್ರಾ ಚೈನ್ ಲಿಂಕ್ ಜಾಲಕ್ಕೆ ಡಿಕ್ಕಿ ಹೊಡೆದು ಜಿಬ್ರಾ ಮೃತಪಟ್ಟಿರುವುದಾಗಿ ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾವ್ಯ ಹೆಸರಿನ ಹೆಣ್ಣು ಜೀಬ್ರಾ ಗರ್ಭಿಣಿಯಾಗಿದ್ದು ಕೆಲವೇ ತಿಂಗಳಲ್ಲಿ ಮರಿ ಹಾಕುವ ನಿರೀಕ್ಷೆ ಇತ್ತು. ಆದರೆ ಇಂದು ನಡೆದ ಘಟನೆಯಿಂದ ಕಾವ್ಯ ಸಾವನ್ನಪ್ಪಿದ್ದು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply