Breaking
20 Sep 2026, Sun

ವಿದ್ಯುತ್ ಶಾಕ್, ಬಾಲಕಿ ಸಾವು

ಆನೇಕಲ್ ತಾಲ್ಲೂಕಿನ ನಾರಾಯಣಘಟ್ಟದಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕಿ ವಿದ್ಯುತ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.

ಮೃತ ಬಾಲಕಿಯನ್ನು ನಾರಾಯಣಘಟ್ಟ ಗ್ರಾಮದ ತನಿಷ್ಕಾ(11) ಎಂದು ಗುರುತಿಸಲಾಗಿದೆ

ಶಾಲೆಗೆ ರಜೆ ಇದ್ದ ಕಾರಣ ಮನೆ ಬಳಿಯೇ ಆಟವಾಡುತ್ತಿದ್ದಳು, ವಿದ್ಯುತ್‌ ಕಂಬದ ಬಳಿ ಆಟವಾಡುತ್ತಿದ್ದಾಗ ಕರೆಂಟ್ ತಗುಲಿದೆ. ವಿದ್ಯುತ್ ಶಾಕ್‌ನಿಂದ ಗಾಯಗೊಂಡಿದ್ದ ತನಿಷ್ಕಾಳನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗಿದೇ ಬಾಲಕಿ ಸಾವನ್ನಪ್ಪಿದ್ದಾಳೆ. ಬೆಸ್ಕಾಂ ನಿರ್ಲಕ್ಷದಿಂದ ಬಾಲಕಿ ಸಾವನ್ನಪ್ಪಿರುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು, ಜೊತೆಗೆ ಬಾಲಕಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು

Leave a Reply