Breaking
9 Feb 2026, Mon

ಬುಕ್ಕಸಾಗರ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

ಬೆಂ.ದಕ್ಷಿಣ ವ್ಯಾಪ್ತಿಯ ಬುಕ್ಕಸಾಗರ ಗ್ರಾಮದಲ್ಲಿ ಹೊಬಳಿ ಮಟ್ಟದಲ್ಲಿ ಬುಕ್ಕಸಾಗರ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು.

ಸ್ಥಳೀಯ ಮಟ್ಟದಲ್ಲಿ ಕ್ರಿಕೆಟ್ ಆಡುವ ಯುವಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಟೈರ್ ಬಾಬು , ಬುಕ್ಕಸಾಗರ ಮಂಜಣ್ಣ ಹಾಗೂ ಬಿಬಿಆರ್ ಬಾಬು ರವರ ನೇತೃತ್ವದಲ್ಲಿ ಅದ್ದೂರಿಯಾಗಿ ಪಂದ್ಯಾವಳಿ ನಡೆಸಲಾಯಿತು

ಜಿಗಣಿ ಹೊಬಳಿ ಮಟ್ಟದಲ್ಲಿ ಆಯೋಜನೆ ಮಾಡಿದ್ದ ಪಂದ್ಯಾವಳಿಯಲ್ಲಿ ವಿವಿಧ ಭಾಗಗಳಿಂದ 14 ತಂಡಗಳು ಭಾಗವಹಿಸಿ ಅಂತಿಮ ಪ್ರಶಸ್ತಿ ಸುತ್ತಿಗಾಗಿ ಸೆಣೆಸಾಟ ನಡೆಸಿದವು.

ಅಂತಿಮವಾಗಿ ಫೈನಲ್ ನಲ್ಲಿ ಹಾರಗದ್ದೆಯ ವಿನಾಯಕ ಕ್ರಿಕೆಟರ್ಸ್ ಹಾಗೂ ಹುಲ್ಲಹಳ್ಳಿ ಕ್ರಿಕೆಟರ್ಸ್ ನಡುವೆ ಫೈನಲ್ ಪಂದ್ಯ‌ ನಡೆಸಲಾಯಿತು. ಪಂದ್ಯದಲ್ಲಿ ಹಾರಗದ್ದೆಯ ವಿನಾಯಕ ಕ್ರಿಕೆಟರ್ಸ್ ಗೆಲುವು ಸಾಧಿಸುವ ಮೂಲಕ ಮೊದಲ ಬಹುಮಾನವನ್ನು ಪಡೆದರೆ, ಎರಡನೇ ಬಹುಮಾನವನ್ನು ಹುಲ್ಲಹಳ್ಳಿ ಕ್ರಿಕೆಟರ್ಸ್ ತಂಡ ತಮ್ಮದಾಗಿಸಿಕೊಂಡಿತು. ಮೂರನೇ ಬಹುಮಾನವನ್ನ ಹುಲಿಮಂಗಲದ ಅಭಿಮನ್ಯು ಕ್ರಿಕೆಟರ್ಸ್ ತಂಡ ಪಡೆದುಕೊಂಡಿತು.

ಮೊದಲನೇ ಬಹುಮಾನವಾಗಿ 1 ಲಕ್ಷ 20 ಸಾವಿರ ನಗದು ಹಾಗೂ ಟ್ರೋಫಿ ವಿತರಣೆ ಮಾಡಲಾಯಿತು, ಎರಡನೇ ಬಹುಮಾನವಾಗಿ 50 ಸಾವಿರ ನಗದು ಹಾಗೂ ಟ್ರೋಪಿ ನೀಡಲಾಯಿತು. ಮೂರನೇ ಬಹುಮಾನವಾಗಿ 25 ಸಾವಿರ ನಗದು ಹಾಗೂ ಟ್ರೋಫಿ ವಿತರಿಸಲಾಯಿತು.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply