Breaking
17 Jul 2026, Fri

ಆನೇಕಲ್ ಗುರುಭವನದಲ್ಲಿ ರಾಜ ಲಾಂಛನ ಸಂಸ್ಥೆ ವತಿಯಿಂದ ಶಿಕ್ಷಕರಿಗೆ ಗೌರವ ಪೂರ್ವಕ ಅಭಿನಂದನೆ ಸಲ್ಲಿಕೆ

ಆನೇಕಲ್ ಪಟ್ಟಣದಲ್ಲಿರುವ ಗುರು ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ರಾಜ ಲಾಂಛನ ಸಂಸ್ಥೆ ವತಿಯಿಂದ ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು.

ಕಳೆದ ಐದಾರು ವರ್ಷಗಳಿಂದ ರಾಜ ಲಾಂಛನ ಸಂಸ್ಥೆಯು ಎಸ್ ಎಸ್.ಎಲ್. ಸಿ. ಪರೀಕ್ಷೆ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬುವಂತಹ ಕೆಲಸವನ್ನು ಮಾಡುತ್ತಿದೆ , ಈ ವರ್ಷವೂ ಸಹ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಜಲಾಂಛನ ಸಂಸ್ಥೆಯು
ಪೂರಕ ಪರೀಕ್ಷೆಗೆ ಸಿದ್ದತಾ ಶಿಬಿರವನ್ನು ಅಯೋಜಿಸಿ ಸುಮಾರು 20 ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಎರಡು ಗಂಟೆಗಳ ಕಾಲ ನುರಿತ ಶಿಕ್ಷಕರಿಂದ ಎಸ್.ಎಸ್. ಎಲ್ ಸಿ ಪರೀಕ್ಷೆಗೆ ಸಂಬಂದಿಸಿದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಬೋದನೆ ಮಾಡಲಾಯಿತು.

ಪರೀಕ್ಷೆಯನ್ನು ವಿದ್ಯಾರ್ಥಿಗಳು ದಿಟ್ಟವಾಗಿ ಪರೀಕ್ಷೆ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಆಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಳ್ಳಲಾಯಿತು

ಮಕ್ಕಳಿಗೆ ಪರೀಕ್ಷಾಪೂರ್ವ ಶಿಬಿರ ನಡೆಸಲು ಕಾರಣೀಭೂತರಾದ ಶಿಕ್ಷಕರಿಗೆ ಇಂದು ಆನೇಕಲ್ ಪಟ್ಟಣದಲ್ಲಿರುವ ಗುರು ಭವನದಲ್ಲಿ ಅಭಿನಂದನ ಕಾರ್ಯಕ್ರಮದಲ್ಲಿ ಆಯೋಜಿಸಿ ರಾಜ ಲಾಂಛನ ಸಂಸ್ಥೆ ವತಿಯಿಂದ ಗೌರವ ಪೂರ್ವಕವಾಗಿ ಧನ್ಯವಾದ ಸಲ್ಲಿಸಲಾಯಿತು.

ಇನ್ನು ಕಾರ್ಯಕ್ರಮದಲ್ಲಿ ರಾಜ ಲಾಂಛನ ಸಂಸ್ಥೆಯ ಜಿಗಣಿ ಘಟಕದ ಅಧ್ಯಕ್ಷ ತೆಲಗರಹಳ್ಳಿ ಗಣೇಶ್. ಉಪಾಧ್ಯಕ್ಷ ತಿರುಪಾಳ್ಯ ಮಂಜು. ವಸಂತ್. ಕಲೀಂ.ಶಶಿಕಲಾ. ತಿಮ್ಮರಾಯಸ್ವಾಮಿ ಶಾಲೆಯ ನಿವೃತ್ತ ಶಿಕ್ಷಕ ಶ್ರೀನಿವಾಸು (ವಾಸು). ಸರಸ್ವತಿ ವಿದ್ಯಮಂದಿರ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಭಾಗ್ಯ ಶ್ರೀನಿವಾಸ್. ಲಲಿತ. ಪದ್ಮ. ಪ್ರವೀಣ, ಸೋಮಶೇಖರ್. ರಾಧ. ರಾಭಿನ್ ಸನ್. ಶಿಕ್ಷಕರು.ಪೋಷಕರು. ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply