Breaking
10 Feb 2026, Tue

ಲಿಟಲ್ ಸನ್ ಶೈನ್ ಇಂಟರ್ನ್ಯಾಷನಲ್ ಪ್ರಿ ಸ್ಕೂಲ್ ವತಿಯಿಂದ ವಿದ್ಯಾರಂಭ ಕಾರ್ಯಕ್ರಮ

ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪವಿರುವ ಅತ್ತಿಬೆಲೆ ಪಬ್ಲಿಕ್ ಶಾಲೆಯ ಆವರಣದಲ್ಲಿ ಲಿಟಲ್ ಸನ್ ಶೈನ್ ಇಂಟರ್ ನ್ಯಾಷನಲ್ ಪ್ರಿ ಸ್ಕೂಲ್ ವತಿಯಿಂದ ವಿದ್ಯಾರಂಭ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು

ಪ್ರಿ ಸ್ಕೂಲ್ ನಲ್ಲಿ ದಾಖಲಾದ ಮಕ್ಕಳು ತಮ್ಮ ಪೋಷಕರ ಜೊತೆ ಶಾಸ್ತ್ರೋಕ್ತವಾಗಿ ಅಕ್ಷರಭ್ಯಾಸ ಮಾಡುವ ಮೂಲಕ ವಿದ್ಯಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

ಈ ಕುರಿತು ಮಾತನಾಡಿದ ಎಪಿಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಮುನಿರಾಜು ಹಿಂದೂ ಧರ್ಮದಲ್ಲಿ ಮಕ್ಕಳು ಶಾಲೆಗೆ ಸೇರುವ ಮುನ್ನ ಅಕ್ಷರಭ್ಯಾಸ ಮಾಡಿಸುವ ಸಂಪ್ರದಾಯ ನೂರಾರು ವರ್ಷಗಳಿಂದ ರೂಢಿಯಲ್ಲಿದೆ.

ದೇವಾಲಯ ಹಾಗೂ ಗುರುಗಳ ಸನ್ನಿಧಾನದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರೆ ಮಕ್ಕಳು ಕಲಿಕೆಯಲ್ಲಿ ಯಶಸ್ಸು ಸಾಧಿಸುತ್ತಾರೆ ಎಂಬ ನಂಬಿಕೆ ಪೊಷಕರಲ್ಲಿದೆ. ಆದರೆ ಇಂದು ನಮ್ಮ ಶಾಲೆಯಲ್ಲೇ ಸರಸ್ವತಿ ಪೂಜೆ ಮಾಡಿ ಶ್ರೀ ಲಕ್ಷ್ಮಿ ನಾರಾಯಣ ಆಚಾರ್ಯರ ಸಮ್ಮುಖದಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಲಾಗಿದೆ. ಮಕ್ಕಳು ಮುಂದೆ ಕಲಿಕೆಯಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲಿ.. ಎಂದು ಹಾರೈಸಿದರು.

ಮಕ್ಕಳಿಗೆ ವಿದ್ಯಾರಂಭ ಮಾಡಿ ಅಕ್ಷರ ಅಭ್ಯಾಸ ಕಾರ್ಯಕ್ರಮ ನಡೆಸಿದ ಪೋಷಕರು ಸಂತಸದಿಂದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಅಕ್ಷರಭ್ಯಾಸ ಮಾಡಿಸಿರುವುದು ತುಂಬಾ ಖುಷಿ ತಂದಿದೆ. ಎಪಿಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಮುನಿರಾಜು ಹಾಗೂ ಅಧ್ಯಾಪಕ ವರ್ಗಕ್ಕೆ ಎಲ್ಲ ಪೋಷಕರು ತುಂಬು ಹೃದಯದ ಧನ್ಯವಾದ ಅರ್ಪಿಸಿದರು.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply