Breaking
10 Feb 2026, Tue

ಕೆ ಪಿ ರಾಜು ರವರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳಿಂದ ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆ

ಜನರಿಂದ ಜನರಿಗಾಗಿ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಯುವ ನಾಯಕರಾದ ಕೆ.ಪಿ.ರಾಜು ರವರ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಯುವ ನಾಯಕರಾದ ಕೆ.ಪಿ.ರಾಜು ರವರ ಹುಟ್ಟು ಹಬ್ಬ ಅಂಗವಾಗಿ ಬ್ಯಾಗಡದೇನಹಳ್ಳಿ ಗ್ರಾಮದ ಬಳಿಯಿರುವ ಆಶ್ರಮ ವೃದ್ದಾಶ್ರಮದಲ್ಲಿ ವೃದ್ದರಿಗೆ ಬಟ್ಟೆ ವಿತರಣೆ , ಮತ್ತು ಸಿಪಾನಿ ಸೇವಾ ಸದನದಲ್ಲಿ ಹಾಗೂ ಹೆಬ್ಬಗೋಡಿ ವೃತ್ತದಲ್ಲಿ ಅನ್ನದಾಸೋಹ ಮಾಡಲಾಯಿತು, ಸರ್ಕಾರಿ ಶಾಲೆ ಮಕ್ಕಳಿಗೆ ಕಲಿಕೆಯ ಪರಿಕರಗಳು, ಬ್ಯಾಗ್ ವಿತರಣೆ ಸೇರಿದಂತೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಕೆ.ಪಿ.ರಾಜಣ್ಣ ಅಭಿಮಾನಿ ಬಳಗವು ಆಯೋಜಿಸುವ ಮೂಲಕ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇನ್ನು ತಾಲ್ಲೂಕಿನ ನೂರಾರು ಅಭಿಮಾನಿಗಳು ಕೆ.ಪಿ.ರಾಜು ಅವರಿಗೆ ಹುಟ್ಟು ಹಬ್ಬದ ಅಂಗವಾಗಿ ಅವರನ್ನು ಸನ್ಮಾನಿಸಿ ಅಭಿನಂಧಿಸಿ ಶುಭ ಹಾರೈಸಿದರು,

ಇದೇ ಸಂದರ್ಭದಲ್ಲಿ ಜನರಿಂದ ಜನರಿಗಾಗಿ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಯುವ ನಾಯಕರಾದ ಕೆ.ಪಿ.ರಾಜು ಮಾತನಾಡಿ ನನ್ನ ಹುಟ್ಟು ಹಬ್ಬದ ಅಂಗವಾಗಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಲಿಕೆಯ ಪರಿಕರಗಳು, ಬ್ಯಾಗ್, ಸೇರಿದಂತೆ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸರಳವಾಗಿ ಆಚರಣೆ ಮಾಡಲಾಗಿದೆ ಇನ್ನು ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು,

ಇನ್ನು ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಗೊಟ್ಟಿಗೆರೆ ಮಂಜುನಾಥ್, ಹೆಬ್ಬಗೋಡಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುರುಗೇಶ್. ಹೆಬ್ಬಗೋಡಿ ನಗರ ಸಭೆ ಸದಸ್ಯರಾದ ಐಟಿ ಐ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡೈರಿ ಮಂಜುನಾಥ್, ಕುಶಾಲ್, ಹಾಗೂ ಯುವ ನಾಯಕರಾದ ಹೆಬ್ಬಗೋಡಿ ಬಾಸ್ಕರ್. ಸಂಪಿಗೆ ನಗರದ ಬಿಜೆಪಿ ಮುಖಂಡರಾದ ಚೇತನ್, ತುಳಸಿ, ಹಾಗೂ
ಕೆ.ಪಿ.ರಾಜಣ್ಣ ಅಭಿಮಾನಿ ಬಳಗದವರು ಹಾಜರಿದ್ದರು.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply