Breaking
4 Jun 2025, Wed

ಟೆಲಿ ಲಾ ಮೂಲಕ ಮಹಿಳೆಯರು ಕಾನೂನು ಅರಿವು ಪಡೆಯಲು ಮನವಿ

ದೇಶದಲ್ಲಿ ಕಾನೂನು ಅರಿವು ಕೊರತೆಯಿಂದ ಮಹಿಳೆಯರು, ಮಕ್ಕಳು, ದಲಿತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಹೀಗಾಗಿ ಟೆಲಿ ಲಾ ಮೂಲಕ ಮಹಿಳೆಯರು ಕಾನೂನು ಅರಿವು ಪಡೆಯಬೇಕು ಎಂದು ವಕೀಲರಾದ ಪುರುಷೋತ್ತಮ್ ಮನವಿ ಮಾಡಿದ್ದಾರೆ

ತಾಲ್ಲೂಕಿನ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಟೈಲರಿಂಗ್ ಮತ್ತು ಕಂಪ್ಯೂಟರ್ ತರಬೇತಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಟೆಲಿ ಲಾ ಮೂಲಕ ಮನೆ ಮನೆಗೆ ಕಾನೂನು ಅರಿವು ತಲುಪಿಸುವ ಕೆಲಸ ಮಾಡುತ್ತಿದೆ.‌ ಅದನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಕೌಶಲ್ಯ ತರಬೇತುದಾರರಾದ ಸೌಮ್ಯ ಮಾತನಾಡಿ, ಟೆಲಿ ಲಾ ಯೋಜನೆ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಅನುಕೂಲವಾಗುತ್ತಿದೆ, ಆನ್ ಲೈನ್ ಮೂಲಕ ಉಚಿತವಾಗಿ ಕಾನೂನು ಅರಿವು ಮೂಡಿಸಲಾಗುತ್ತಿದೆ. ಈ ಬಗ್ಗೆ ಗ್ರಾಮಾಂತರ ಭಾಗದ ಜನತೆಗೆ ಹೆಚ್ಚಿನ ಅರಿವು ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಕೀಲರಾದ ಇಚ್ಚಂಗೂರು ಆಶಾ, ತರಬೇತಿದಾರರಾದ ಸುನಿತಾ, ರಘುರಾಮ್, ರಾಜು ಹಾಗೂ ವಿದ್ಯಾರ್ಥಿಗಳಾದ ಚೈತನ್ಯಾ, ನವ್ಯಾ, ಅರ್ಚಿತಾ, ಗೀತಾ, ಭವ್ಯಾ, ನಿಶಾಂತಿ, ರಾಮಾಚಾರಿ ಮತ್ತಿತರರಿದ್ದರು.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply