Breaking
21 Jul 2026, Tue

ಪ್ರಜ್ಞೆ ತಪ್ಪಿಸಿ ವೃದ್ದೆ ಬಳಿ ಒಡವೆಗಳ ಕಳ್ಳತನ

ಕಲ್ಲು ಕೊಟ್ಟು ಪ್ರಜ್ಞೆ ತಪ್ಪಿಸಿ ವೃದ್ದೆ ಬಳಿ ಇದ್ದ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಲಾಗಿದೆ.

ಆನೇಕಲ್ ತಾಲೂಕಿನ ಕೆಂಪೊಡರಹಳ್ಳಿ ಗ್ರಾಮದಲ್ಲಿ ಇಂದು ಘಟನೆ ನಡೆದಿದೆ ಅಡ್ರೆಸ್ ಕೇಳುವ ನೆಪದಲ್ಲಿ ಮನೆ ಬಳಿ ಬಂದ ದಂಪತಿಗಳು ವೃದ್ದೆ ಸಾವಿತ್ರಮ್ಮ ಬಳಿ ಬಂದು ಕಲ್ಲು‌ ಇರುವ ಒಂದು ಪ್ಯಾಕೆಟ್ ನೀಡಿ ಪ್ರಜ್ಞೆ ತಪ್ಪಿಸಿದ್ದಾರೆ.

ಬಳಿಕ ವೃದ್ದೆ‌ ಬಳಿ ಇದ್ದ 40 ಗ್ರಾಂ ಚಿನ್ನದ ಒಡವೆ ಕದ್ದು ದಂಪತಿ‌ ಪರಾರಿಯಾಗಿದ್ದಾರೆ. ಟಿವಿಎಸ್ ಗಾಡಿಯಲ್ಲಿ ದಂಪತಿಗಳು ಗ್ರಾಮದಲ್ಲಿ ಓಡಾಡಿರುವ ದೃಶ್ಯಗಳು ಸಿ ಸಿ ಕ್ಯಾಮೆರಾ ಗಳಲ್ಲಿ ಸೆರೆಯಾಗಿದೆ.

ಚಿನ್ನದ ಒಡವೆಗಳನ್ನ ಕಳೆದುಕೊಂಡ ಸಾವಿತ್ರಮ್ಮ ಕಂಗಾಲಾಗಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಲಾಗಿದೆ

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply