ಆನೇಕಲ್ ತಾಲೂಕಿನ ತೆಲಗರಹಳ್ಳಿ ಗ್ರಾಮದಲ್ಲಿ ಶ್ರೀ ಧರ್ಮರಾಯಸ್ವಾಮಿ ದೌಪದಿ ದೇವಿಯ ಹಸಿ ಕರಗ ಮಹೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು.
ದೇವಾಲಯದಿಂದ ಹೊರಬಂದ ಹಸಿ ಕರಗ ಊರಿನ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ಮಲ್ಲಿಗೆ ಹೂವನ್ನ ಕರಗದ ಮೇಲೆ ಹಾಕುವ ಮೂಲಕ ಗ್ರಾಮಸ್ಥರು ಕರಗವನ್ನು ಬರಮಾಡಿಕೊಂಡರು.
ನಾದಸ್ವರದ ನಾದಕ್ಕೆ ಕರಗ ಹೆಜ್ಜೆ ಹಾಕುವ ಮೂಲಕ ಗ್ರಾಮಸ್ಥರಿಗೆ ವಿಶೇಷ ಮನೋರಂಜನೆ ನೀಡಿತು. ಕರಗ ಮಹೋತ್ಸವ ಹಿನ್ನೆಲೆಯಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

