Breaking
20 Sep 2026, Sun

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅನುಮಾನಸ್ಪದವಾಗಿ ಕರಡಿ ಸಾವು

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕರಡಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ತುಮಕೂರಿನ ಅರಣ್ಯದಲ್ಲಿ ಬಲೆಗೆ ಬಿದ್ದು ನಿತ್ರಾಣಗೊಂಡಿದ್ದ ಕರಡಿಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಎಂದು ಕರಡಿ ಮೃತಪಟ್ಟಿದೆ. ಕಳೆದ ಎರಡು ದಿನದ ಹಿಂದೆ ಚಿರತೆಯೊಂದು ಮೃಗಾಲಯದಲ್ಲಿ ಮೃತಪಟ್ಟಿದ್ದ ಬೆನ್ನಲೇ ಕರಡಿ ಮೃತಪಟ್ಟಿರುವುದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಕರಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ

Leave a Reply