Breaking
20 Sep 2026, Sun

ಬನ್ನೇರುಘಟ್ಟ ಪೊಲೀಸರಿಂದ ಖತರ್ನಾಕ್ ದ್ವಿಚಕ್ರ ವಾಹನ ಕಳ್ಳನ ಬಂಧನ

ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಖತರ್ನಾಕ್ ದ್ವಿಚಕ್ರ ವಾಹನ ಕಳ್ಳನನ್ನ ಬಂಧಿಸುವಲ್ಲಿ ಬನ್ನೇರುಘಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ. 21 ವರ್ಷದ ಅರ್ಬಾಸ್ ಬಂದಿತ ಅರೋಪಿ. ಕಳ್ಳತನ ಪ್ರಕರಣದಲ್ಲಿ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದ ಅರ್ಬಾಸ್ ತನ್ನ ಹಳೆ ಚಾಳಿಯನ್ನ ಮುಂದುವರೆಸಿದ್ದ. ಅತ್ತಿಬೆಲೆ, ಆನೇಕಲ್, ಬನ್ನೇರುಘಟ್ಟ ಸುತ್ತಮುತ್ತ ಕಳ್ಳತನ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿ ಅರ್ಬಾಸ್ ಎಂಬಾತನನ್ನ ಬಂಧಿಸಿ ಒಂದು ಆಟೋ ಹಾಗೂ ಐದು ದ್ವಿಚಕ್ರ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ

Leave a Reply