Breaking
10 Feb 2026, Tue

ಸಬ್‌ಮಂಗಲ ಕೆರೆಯಲ್ಲಿ ಆರೋಗ್ಯ ಇಲಾಖೆಗೆ ಸೇರಿದ ಇಂಜೆಕ್ಷನ್‌ ಸಿರೆಂಜ್ ಗಳು ಪತ್ತೆ, ಗ್ರಾಮಸ್ಥರಿಂದ ಆಕ್ರೋಶ

ಆನೇಕಲ್‌ ತಾಲೂಕಿನ ಸಬ್‌ಮಂಗಲ ಗ್ರಾಮದ ಕೆರೆಯಲ್ಲಿ ಆರೋಗ್ಯ ಇಲಾಖೆಗೆ ಸೇರಿದ ಇಂಜೆಕ್ಷನ್ ಸಿರೆಂಜ್ ಗಳು ಪತ್ತೆಯಾಗಿವೆ, ಕವರ್ ನಲ್ಲಿ ರಾಶಿ ಇಂಜೆಕ್ಷನ್ ಸಿರೆಂಜ್‌ಗಳು ಹಾಗೂ ಸೂಜಿಗಳನ್ನ ತಂದು ಕೆರೆ ಪಕ್ಕದಲ್ಲಿ ಬಿಸಾಡಿ ಹೋಗಿದ್ದಾರೆ. ಸಿರಂಜ್‌ಗಳ ಮೇಲೆ ಆರೋಗ್ಯ ಇಲಾಖೆಯ ಹೆಸರು ಇದ್ದು ಗ್ರಾಮಸ್ಥರು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಕಿಡಿ ಕಾರಿದ್ದಾರೆ. ರಾತ್ರಿ ವೇಳೆ ಬಂದು ಅಪಾಯಕಾರಿ ಸಿರೆಂಜ್ ಗಳನ್ನು ಬಿಸಾಡಿ ಹೋಗಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ

Leave a Reply