Breaking
20 Sep 2026, Sun

ರಾಜ್ಯದ ಮೊದಲ ಸಂಪೂರ್ಣ ವಿಮಾ ಗ್ರಾಮ ಪಂಚಾಯಿತಿಯಾದ ಮರಸೂರು ಪಂಚಾಯಿತಿ

ರಾಜ್ಯದಲ್ಲೇ ಮೊದಲ ಸಂಪೂರ್ಣ ವಿಮಾ ಗ್ರಾಮ ಪಂಚಾಯಿತಿಯಾಗಿ ಮರಸೂರು ಗ್ರಾಮ ಪಂಚಾಯಿತಿ ಆಯ್ಕೆಯಾಗುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಇಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಲತಾ ಕುಮಾರಿ ರವರು ಮರಸೂರು ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಕೇಂದ್ರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಸುರಕ್ಷಾ ಭಿಮಾ ಯೋಜನೆ ಅಡಿಯಲ್ಲಿ ಗ್ರಾಮದ ಎಲ್ಲಾ ಗ್ರಾಮಸ್ಥರಿಗೂ ವಿಮೆ ಮಾಡಿಸಿ ಮರಸೂರು ಪಂಚಾಯಿತಿ ಹೊಸ ಮುನ್ನಡಿ ಬರೆದಿದೆ. ಪ್ರಶಸ್ತಿ ಪಡೆದ ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮೇಶ್ ರೆಡ್ಡಿ ಹಾಗೂ ಸದಸ್ಯರು ಹರುಷ ವ್ಯಕ್ತಪಡಿಸಿದರು

Leave a Reply