Breaking
20 Sep 2026, Sun

ಚಲಿಸುತ್ತಿದ್ದ ಕಾರಿಗೆ ಬೆಂಕಿ, ಸುಟ್ಟು ಕರಕಲಾದ ಇಕೋ ಸ್ಪೋರ್ಟ್ಸ್ ಕಾರು

ಚಲಿಸುತ್ತಿದ್ದ ಕಾರಿನ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಸಮೀಪವಿರುವ ಗೋಪಸಂದ್ರ ಗ್ರಾಮದಲ್ಲಿ ಇಂದು ಗುರುವಾರ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಕಾರಿನಲ್ಲಿದ್ದ ಪ್ರಯಾಣಿಕರು ಕಾರಿನಿಂದ ಕೆಳಗೆ ಇಳಿದಿದ್ದಾರೆ. ಬೆಂಕಿ ಇಡೀ ಕಾರನ್ನ ವ್ಯಾಪಿಸಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ದೊಮ್ಮಸಂದ್ರ ದಿಂದ ಮುತ್ತಾನಲ್ಲೂರು ಮಾರ್ಗವಾಗಿ ಬರುತ್ತಿದ್ದ ಕಾರಿನಲ್ಲಿ ಘಟನೆ ನಡೆದಿದ್ದು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply