Breaking
20 Sep 2026, Sun

ಸ್ಟಾಕ್ ಯಾರ್ಡ್ ನಲ್ಲಿ ನಿಲ್ಲಿಸಿದ್ದ ಮಹೇಂದ್ರ ಕಂಪನಿಯ ಹೊಸ ಕಾರುಗಳು ಬೆಂಕಿಗೆ ಆಹುತಿ

ಸ್ಟಾಕ್ ಯಾರ್ಡ್ ನಲ್ಲಿ ನಿಲ್ಲಿಸಿದ್ದ ಮಹೇಂದ್ರ ಕಂಪನಿಯ ಹೊಚ್ಚ ಹೊಸ ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಕರ್ನಾಟಕ ತಮಿಳುನಾಡು ಗಡಿಭಾಗದ ಬಟ್ಲಪಲ್ಲಿ ಗ್ರಾಮದಲ್ಲಿ ಇಂದು ಘಟನೆ ನಡೆದಿದೆ. ಬೇಸಿಗೆ ಶಾಖ ಹೆಚ್ಚಾದ ಪರಿಣಾಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಮೂರು ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಸ್ಥಳೀಯರು ಬೆಂಕಿ ನಂದಿಸಲು ಹರ ಸಾಹಸ ಪಟ್ಟರು ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply