ಆರು ತಿಂಗಳ ಕಾಲ ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಬುಕ್ಕಿ ಒಬ್ಬನನ್ನ ಬಂಧಿಸುವಲ್ಲಿ ಜಿಗಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬುಕ್ಕಸಾಗರ ಗ್ರಾಮದ ನಿವಾಸಿ ಗೊವಿಂದರಾಜು ಬಂಧಿತ ಆರೋಪಿ. ಬಂದಿತನಿಂದ 1ಲಕ್ಷ 18 ಸಾವಿರ ನಗದು ಆರು ಮೊಬೈಲ್ ಹಾಗೂ 50 ಸಿಮ್ ಕಾರ್ಡ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಂದಿತ ಗೊವಿಂದರಾಜು ಹಲವು ವರ್ಷಗಳಿಂದ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಲಕ್ಷ ಲಕ್ಷ ಹಣ ಮಾಡುತ್ತಿದ್ದ ಎನ್ನಲಾಗಿದೆ. ಜಿಗಣಿ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ