Breaking
20 Sep 2026, Sun

ಕದ್ದಿರುವ ಬೈಕ್‌ ಬಳಸಿಕೊಂಡು ಮನೆ ಕಳ್ಳತನ ಮಾಡುತ್ತಿದ್ದ ಮೂವರನ್ನ ಬಂಧಿಸಿದ ಬಾಗಲಕುಂಟೆ ಪೊಲೀಸರು, 76 ಗ್ರಾಂ ಚಿನ್ನ, 16 ಬೈಕ್ ಜಪ್ತಿ

ಕದ್ದಿರುವ ಬೈಕ್‌ಗಳನ್ನೇ ಬಳಸಿಕೊಂಡು ಮನೆ ಕಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಖದೀಮರನ್ನ ಬಂದಿಸುವಲ್ಲಿ ಬಾಗಲಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ವೆಂಕಟೇಶ್, ಶ್ರೀನಿವಾಸ್ ಹಾಗೂ ಸಾಗರ್ ಬಂದಿತ ಆರೋಪಿಗಳು. ದ್ವಿಚಕ್ರವಾಹನಗಳನ್ನ ಕಳವು ಮಾಡಿ ಅದೇ ವಾಹನಗಳನ್ನು ಮನೆ ಕಳ್ಳತನ ಮಾಡಲು ಆರೋಪಿಗಳು ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಮೂವರು ಆರೋಪಿಗಳನ್ನು ಬಂದಿಸಿ 76 ಗ್ರಾಂ ಚಿನ್ನ ಹಾಗೂ 16 ಬೈಕ್‌ ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.

Leave a Reply