Breaking
20 Sep 2026, Sun

ಬೆಗೂರಿನ ಪಟೇಲ್‌ ಬಡಾವಣೆಯಲ್ಲಿ ಮೊಬೈಲ್‌ ಟವ‌ರ್ ಸ್ಥಳಾಂತರ ಮಾಡುವಂತೆ ನಿವಾಸಿಗಳ ಪ್ರತಿಭಟನೆ

ಬೆಂ. ದಕ್ಷಿಣ ವ್ಯಾಪ್ತಿಯ ಬೇಗೂರು ಸಮೀಪವಿರುವ ಪಟೇಲ್ ಬಡಾವಣೆಯಲ್ಲಿ ಮೊಬೈಲ್ ಟವರ್ ಸ್ಥಳಾಂತರ ಮಾಡುವಂತೆ ಒತ್ತಾಯಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದರು. ಹಲವು ವರ್ಷಗಳ ಹಿಂದೆ ಟವರ್ ನಿರ್ಮಾಣವಾಗಿದ್ದು ಟವರ್ ರೆಡಿಯೇಷನ್ ಹೆಚ್ಚಾಗಿ ಸುತ್ತಮುತ್ತಲ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ವೃದ್ಧರಿಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದೆ. ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬರುತ್ತಿದ್ದು ಕೂಡಲೇ ಮೊಬೈಲ್ ಟವರ್ ಸ್ಥಳಾಂತರ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದರು. ಜೊತೆಗೆ ಬೊಮ್ಮನಹಳ್ಳಿ ಬಿಬಿಎಂಪಿ ಜಂಟಿ ಆಯುಕ್ತರಾದ ಅಜಿತ್‌ ರವರಿಗೆ ದೂರನ್ನು ಸಲ್ಲಿಸಿದರು.

Leave a Reply