Breaking
20 Sep 2026, Sun

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 10 ಲಕ್ಷ ವೆಚ್ಚದಲ್ಲಿ ವನ್ಯಜೀವಿಗಳ ದತ್ತು ಸ್ವೀಕಾರ

ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 10 ಲಕ್ಷ ವೆಚ್ಚದಲ್ಲಿ ವಿವಿಧ ವನ್ಯ ಪ್ರಾಣಿಗಳ ದತ್ತು ಸ್ವೀಕಾರ ಮಾಡಲಾಯಿತು.
ಕಿರ್ಲೋಸ್ಕರ್ ಟಯೋಟ ಕಂಪನಿಯಿಂದ 10 ಲಕ್ಷ ವೆಚ್ಚದಲ್ಲಿ ಮೃಗಾಲಯದಲ್ಲಿರುವ ಒಂದು ಆನೆ ,ಒಂದು ಹುಲಿ ,ಒಂದು ಚಿರತೆ, ಒಂದು ಹಿಪೊಪೊಟಮಸ್ ದತ್ತು ಸ್ವೀಕಾರ ಮಾಡಲಾಗಿದೆ. ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಸೇನ್ ರವರಿಗೆ 10 ಲಕ್ಷದ ಚೆಕ್ ನ್ನು ಟಯೋಟ ಕಿರ್ಲೋಸ್ಕರ್ ಕಂಪನಿಯ ಸಿಬ್ಬಂದಿಗಳು ವಿತರಿಸಿದರು. ಪ್ರತಿಯೊಬ್ಬರು ಕಾಡುಪ್ರಾಣಿಗಳನ್ನ ದತ್ತು ಸ್ವೀಕರಿಸಿ ವನ್ಯಜೀವಿಗಳ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾಗಿದೆ ಇಡಿ ಸೂರ್ಯಸೇನ್ ಮನವಿ ಮಾಡಿದರು.

Leave a Reply