ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣೆಯಲ್ಲಿ ಡ್ಯಾನ್ಸ್ ಮಾಸ್ಟರ್ ನೊಬ್ಬ ಕಳ್ತನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಆತನ ಹಿನ್ನೆಲೆ ಕೇಳಿದ್ರೆ ದಂಗಾವತಿ ಗ್ಯಾರಂಟಿ ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಯ ತಾಯಿಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪ್ರೇಯಸಿ ತಾಯಿಯ ಚಿಕಿತ್ಸೆಗೆ ಹಣ ಹೊಂದಿಸೋದಕ್ಕೆ ಸೈಯ್ಯದ್ ಅಲಿ ಬಾಳಸಾಹೇಬ್ ನಡಾಫ್ ಎಂಬ 25 ವರ್ಷದ ಯುವಕ ಕಳ್ಳನತಕ್ಕೆ ಇಳಿದುರುವ ಪ್ರಕರಣ ಬೆಳಕಿಗೆ ಬಂದಿದೆ…
ಇನ್ನು ಬಂದಿತ ಆರೋಪಿ ಸೈ ಯದ್ ಅಲಿ ಅಲಿಯಾಸ್ ನದಾಫ್
ಗದಗ ಜಿಲ್ಲೆ ಲಕ್ಷ್ಮೀಶ್ವರ ತಕಳುಹಿಸಿದ್ದಾರೆ ಸೈಯ್ಯದ್ ಕಳೆದ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಜಿಗಣಿ ಬಳಿ ಸತ್ತಾರ್ ಸಾಬ್ ದಿಣ್ಣೆ ಬಳಿ ರತ್ನಮ್ಮ ಎಂಬುವವರ ಸರ ಎಗರಿಸಿದ್ದ. ಬುಲೆಟ್ ಬೈಕ್‌ನಲ್ಲಿ ಸಿಗರೇಟ್ ಖರೀದಿ ನೆಪದಲ್ಲಿ ಬಂದಿದ್ದ ಆರೋಪಿ ಮಹಿಳೆಯ ಕತ್ತಿನಲ್ಲಿದ್ದ ಎರಡು ಚೈನ್ ಎಗರಿಸಿ ಪರಾರಿಯಾಗಿದ್ದ. ಘಟನೆ ಸಂಬಂಧ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಯಿಂದ 8 ಲಕ್ಷ ಮೌಲ್ಯದ ಚಿನ್ನಾಭರಣ, 2 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಸೈಯದ್ ಅಲಿ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡಿಕೊಂಡಿದ್ದ. ವಿಲಾಸಿ ಜೀವನ ನಡೆಸುವುದನ್ನು ರೂಡಿಗತ ಮಾಡಿಕೊಂಡಿದ್ದ ಈ ಆರೋಪಿಯ ವಿರುದ್ಧ, ಬೆಂಗಳೂರು ನಗರ, ತುಮಕೂರ, ತುಮಕೂರು, ರಾಮನಗರ, ದಾವಣಗೆರೆ ಜಿಲ್ಲೆಗಳಲ್ಲಿ 8 ದ್ವಿಚಕ್ರವಾಹನ ಮತ್ತು ಚಿನ್ನದ ಸರ ಸುಲಿಗೆ ಪ್ರಕರಣಗಳು
ದಾಖಲಾಗಿವೆ. ಆರೋಪಿಯು ತನ್ನ ಪ್ರೇಯಸಿಯ ಜೊತೆ ವಿಲಾಸಿ ಜೀವನ ನಡೆಸಲು ಮತ್ತು ಆಕೆಯ ಪೋಷಕರ ಆಸ್ಪತ್ರೆ ವೆಚ್ಚಗಳನ್ನು ಪೂರೈಸಲು ದ್ವಿಚಕ್ರವಾಹನ ಕಳ್ಳತನ ಮತ್ತು ಚಿನ್ನದ ಸರ ಸುಲಿಗೆ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಆರೋಪಿಯಿಂದ ಗದಗ ಠಾಣೆ PSI ಮತ್ತು ಸಿಬ್ಬಂದಿ ಅಮಾನತ್ತಾಗಿದ್ದರು ಎಂಬ ವಿಚಾರ ಕೂಡ ಬೆಳಕಿಗೆ ಬಂದಿದೆ. ಕಳ್ಳತನ ಕೇಸ್‌ನಲ್ಲಿ ಪೊಲೀಸರು ಸೈಯ್ಯದ್‌ನನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಈ ಆರೋಪಿ ಪೊಲೀಸ್ ಕಸ್ಟಡಿಯಿಂದ ಎಸ್ಕೆಪ್ ಆಗಿದ್ದ. ಆದ್ದರಿಂದ ಗದಗ ಠಾಣೆ PSI ಮತ್ತು ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿತ್ತು ಎನ್ನಲಾಗಿದೆ. ಸಧ್ಯ ಈತನನ್ನು ಬಂಧಿಸಿರುವ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.