Breaking
21 Sep 2026, Mon

ಹಾರೋಹಳ್ಳಿಯಲ್ಲಿ ಕೆರೆಗೆ ಬಿದ್ದು ಯುವತಿಯ ಅನುಮಾನಸ್ಪದ ಸಾವು, ಪ್ರೀತಿಯಲ್ಲಿ ಬಿದ್ದಿದ್ದ ಹುಡುಗಿಯ ಸಾವಿನ ಹಿಂದೆ ಅನುಮಾನ

ಅನೇಕಲ್ ತಾಲೂಕಿನ ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋಹಳ್ಳಿ ಕೆರೆಗೆ ಯುವತಿಯೊಬ್ಬಳು ಬಿದ್ದು ಸಾವನ್ನಪ್ಪಿದ್ದಾಳೆ.

23 ವರ್ಷದ ಸಹನ ಸಾವನ್ನಪ್ಪಿರುವ ದುರ್ದೈವಿ. ತನ್ನ ತಂದೆ ಜೊತೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸಮಯದಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು ಕೆರೆಗೆ ಬಿದ್ದಿದೆ. ಘಟನೆಯಲ್ಲಿ ಸಹನಾ ಸಾವನ್ನಪ್ಪಿದರೆ ತಂದೆ ಬಚಾವಾಗಿದ್ದಾರೆ. ಆದರೆ ಸಹನಾ ಇತ್ತೀಚೆಗೆ ತನ್ನ ಸ್ನೇಹಿತನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಇದಕ್ಕೆ ಪೋಷಕರಿಂದ ವಿರೋದ ವ್ಯಕ್ತವಾಗಿತ್ತು. ಈ ವಿಚಾರವಾಗಿಯೇ ಸಹನ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಸಂಬಂಧ ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply