Breaking
20 Sep 2026, Sun

ಆನೇಕಲ್ ನಲ್ಲಿ ಸರ್ಕಾರಿ ಆಸ್ಪತ್ರೆಗೆ ಅಂಬ್ಯುಲೇನ್ಸ್ ಕೊಡುಗೆಯಾಗಿ ನೀಡಿದ ಶಾಸಕ ಶಿವಣ್ಣ

ಆನೇಕಲ್ ತಾಲೂಕಿನ ಸೂರ್ಯ ಸಿಟಿಯಲ್ಲಿ ಬಿಎಸ್ ಫೌಂಡೇಶನ್ ಹಾಗೂ ಶಿವಣ್ಣ ಹಿತೈಷಿ ಬಳಗದ ವತಿಯಿಂದ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ಆಂಬುಲೆನ್ಸ್ ಕೊಡುಗೆಯಾಗಿ ನೀಡಲಾಗಿದೆ. ಶಾಸಕ ಶಿವಣ್ಣ ನೆಲಮಂಗಲ ಶಾಸಕ ಶ್ರೀನಿವಾಸ್ ಹಾಗೂ ಎಂಎಲ್ಸಿ ರಾಮೋಜಿಗೌಡ ರವರ ಸಮ್ಮುಖದಲ್ಲಿ ಆಂಬುಲೆನ್ಸ್ ವಿತರಣೆ ಮಾಡಲಾಯಿತು. ರೋಗಿಗಳಿಗೆ ತುರ್ತು ಸಮಯದಲ್ಲಿ ಉಪಯೋಗವಾಗುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ನೀಡಲಾಗಿದೆ. ಆನೇಕಲ್ ಶಾಸಕ ಶಿವಣ್ಣರವರ ಹುಟ್ಟು ಹಬ್ಬದ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮ ನಡೆಸಲಾಯಿತು ಜೊತೆಗೆ ಅಂಗನವಾಡಿ ಸಹಾಯಕರು ಹಾಗೂ ಬಿಸಿಯೂಟ ಸಹಾಯಕರಿಗೆ ಕಿಟ್ ವಿತರಣೆ ಕಾರ್ಯಕ್ರಮ ಸಹ ನಡೆಸಲಾಯಿತು

Leave a Reply