Breaking
20 Sep 2026, Sun

ಮಲ್ಲೇಶ್ವರಂನಲ್ಲಿ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ಅಶ್ವಥ್ ನಾರಾಯಣ್

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಯೂತ್ ಆಫ್ ಮಲ್ಲೇಶ್ವರಂ ಸಂಘದ ವತಿಯಿಂದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು. ದಿವಂಗತ ಪುನೀತ್ ರಾಜಕುಮಾರ್ ರವರ ಸ್ಮರಣಾರ್ಥ ಆಯೋಜನೆಯಾಗಿದ್ದ ಕ್ರೀಡಾಕೂಟವನ್ನು ಶಾಸಕ ಅಶ್ವತ್ ನಾರಾಯಣ್ ಉದ್ಘಾಟಿಸಿದರು. ವಿವಿಧ ಶಾಲೆಗಳ 400ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿಶೇಷ ಚೇತನ ಮಕ್ಕಳಿಗಾಗಿಯೇ ವಿವಿಧ ರೀತಿಯ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

Leave a Reply