Breaking
20 Sep 2026, Sun

ಬೇಗಿಹಳ್ಳಿಯ ವಾಟಿಕಾ ಲೇಔಟ್‌ನಲ್ಲಿ ಚಿರತೆ ಸೆರೆಹಿಡಿದ ಅರಣ್ಯ ಇಲಾಖೆ

ಆನೇಕಲ್ ತಾಲೂಕಿನ ಬೇಗಿಹಳ್ಳಿ ಸಮೀಪದ ವಾಟಿಕಾ ಬಡಾವಣೆ ಸುತ್ತಮುತ್ತ ಜನರ ನಿದ್ದೆಗೆಡ್ಡಿಸಿದ್ದ ಚಾಲಾಕಿ ಚಿರತೆಯನ್ನ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಂದು ಸೆರೆ ಹಿಡಿದಿದ್ದಾರೆ. ಕಳೆದ ಒಂದು ವಾರದಿಂದ ಚಿರತೆ ಎರಡು ಹಸುಗಳನ್ನ ತಿಂದು ಈ ಭಾಗದಲ್ಲಿ ಜನರ ಆತಂಕಕ್ಕೆ ಕಾರಣವಾಗಿತ್ತು. ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಬಡಾವಣೆ ಸುತ್ತಮುತ್ತ ಬೋನುಗಳನ್ನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ರೂಪಿಸಲಾಗಿತ್ತು. ಇಂದು ಚಾಲಾಕಿ ಚಿರತೆ ಬೋನಿಗೆ ಬಿದ್ದಿದ್ದು ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ

Leave a Reply