Breaking
25 May 2026, Mon

ರಾಜಾಪುರದಲ್ಲಿ ನಡೆದ ಜಗದೀಶ್ ಕೊಲೆ ಪ್ರಕರಣ, ಆರೋಪಿ ಮಾದೇಶ್ ಎಂಬಾತನ ಬಂಧಿಸಿದ ಜಿಗಣಿ ಪೊಲೀಸರು

ಜನವರಿ 17 ರಂದು ರಾಜಪುರದಲ್ಲಿ ನಡೆದಿದ್ದ ವ್ಯಕ್ತಿಯ ಕೊಲೆ ಪ್ರಕರಣವನ್ನು ಜಿಗಣಿ ಪೊಲೀಸರು ಭೇದಿಸಿದ್ದಾರೆ, ಕೊಲೆ ಪ್ರಕರಣದ ಆರೋಪಿ ಮಾದೇಶ್ ಎಂಬಾತನನ್ನ ಜಿಗಣಿ ಪೊಲೀಸರು ಬಂಧಿಸಿದ್ದಾರೆ. ರಾಜಾಪುರದಲ್ಲಿ ಜಗದೀಶ್ ಎಂಬ ವ್ಯಕ್ತಿಯನ್ನು ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಜಿಗಣಿ ಪೊಲೀಸರು ಮೃತ ಜಗದೀಶ್ ಸ್ನೇಹಿತ ಮಾದೇಶ್ ಎಂಬಾತನನ್ನು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಜಗಳವಾಗಿ ಮಾದೇಶ್ ಜಗದೀಶನನ್ನ ಕೊಲೆ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ. ಮತ್ತೊಬ್ಬ ಆರೋಪಿ ಭುವನೇಶನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ

Leave a Reply