ಆನೇಕಲ್ ತಾಲೂಕಿನ ತೆಲಗರಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿವೆ. ಗ್ರಾಮದ ರೈತ ಮಂಜುನಾಥ್ ಎಂಬುವರು ಬೆಳೆದಿದ್ದ ಟೊಮೊಟೊ ಹಾಗೂ ಸೇವಂತಿಗೆ ಬೆಳೆಯನ್ನ ಕಾಡಾನೆಗಳು ತುಳಿದು ನಾಶಗೊಳಿಸಿವೆ. ಪದೇಪದೇ ಕಾಡಾನೆಗಳು ಗ್ರಾಮಕ್ಕೆ ಲಗ್ಗೆ ಇಡುತ್ತಿದ್ದರೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಗಳನ್ನು ನಿಯಂತ್ರಣ ಮಾಡುತ್ತಿಲ್ಲ ಅಂತ ಗ್ರಾಮಸ್ಥರು ಅಕ್ರೋಶ ಹೊರ ಹಾಕಿದರು. ಜೊತೆಗೆ ಬೆಳೆ ಹಾನಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ರೈತರು ಆಗ್ರಹಿಸಿದರು

