Breaking
20 Sep 2026, Sun

ಕೆಆರ್ ಮಾರ್ಕೆಟ್ ಸಮೀಪದ ಆರ್‌ಟಿ ಸ್ಟ್ರೀಟ್ ನಲ್ಲಿ ಗನ್ ತೋರಿಸಿ ಮನೆ ದರೋಡೆ, ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ

ಬೆಂಗಳೂರಿನ ಕೆ ಆರ್ ಮಾರುಕಟ್ಟೆ ಸಮೀಪವಿರುವ ಆರ್ ಟಿಸ್ಟ್ರೀಟ್ ನಲ್ಲಿ ಗನ್ ಹಾಗೂ ಮಾರುಕಾಸ್ತ್ರಗಳನ್ನು ತೋರಿಸಿ ಮನೆ ದರೋಡೆ ಮಾಡಲಾಗಿದೆ. ಚಿಕ್ಕಪೇಟೆಯ ವ್ಯಾಪಾರಿಯ ಮನೆಗೆ ನುಗ್ಗಿದ ನಾಲ್ವರು ಕಿರಾತಕರು ತಾಯಿ ಹಾಗೂ ಮಗ ಮನೆಯಲ್ಲಿದ್ದ ಸಮಯದಲ್ಲೇ ಗನ್ ಹಾಗೂ ಮಾರಕಾಸ್ತ್ರ ತೋರಿಸಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಮಟ ಮಟ ಮಧ್ಯಾಹ್ನವೇ ಘಟನೆ ನಡೆದಿದ್ದು ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಚಿಕ್ಕಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ

Leave a Reply