Breaking
10 Feb 2026, Tue

ನನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದು ಬಿಕಾಂ ವಿದ್ಯಾರ್ಥಿ ನಾಪತ್ತೆ

ಮೋಹಿತ್ ಋಷಿ ನಾಪತ್ತೆಯಾದ ವಿದ್ಯಾರ್ಥಿ. ವಿದ್ಯಾರಣ್ಯಪುರದ ನಿವಾಸಿ ಅರ್ಜುನ್ ಕುಮಾರ್ ಎಂಬುವವರ ಪುತ್ರ ಮೋಹಿತ್ ಋಷಿ ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ.ಅಧರ್ಮದ ಜಗತ್ತನ್ನ ತೊರೆದು ಸತ್ಯದ ಕಡೆ ಹೋಗುತ್ತಿದ್ದೇನೆ, ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ ಎಂದು ಬರೆದು ಬೆಂಗಳೂರಿನ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದಾನೆ.ಈ ಬಗ್ಗೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಯ ಪೋಷಕರು ದೂರು ನೀಡಿದ್ದಾರೆ. ಸದ್ಯ ಉತ್ತರ ಪ್ರದೇಶದ ಪ್ರಯಾಜ್ ರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿರುವುದರಿಂದ ಮೋಹಿತ್ ಪ್ರಯಾಗ್ ರಾಜ್‌ಗೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಿಸಿಟಿವಿ ಪರಿಶೀಲನೆ ಮಾಡಿ ಹುಡುಕಾಡುತ್ತಿರುವ ಪೊಲೀಸರು, ಮೋಹಿತ್ ಪ್ರಯಾಗ್‌ರಾಜ್‌ಗೆ ಹೋಗಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

Leave a Reply