Breaking
10 Feb 2026, Tue

ಬೆಂಗಳೂರು ರಾಮಯ್ಯ ಆಸ್ಪತ್ರೆ ಸ್ಟಾಫ್ ನರ್ಸ್ ಸಾವು, ಗಂಡನ ಕಿರುಕುಳ ಆರೋಪ

ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯ ಕುಮಾರಿ (38) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಆಗಿದ್ದಾಳೆ. ಗಂಡನಿಂದ ದೈಹಿಕ ಹಾಗೂ ಮಾನಸಿಕ ಕಿರುಕುಳ ಆರೋಪ ಕೇಳಿಬಂದಿದೆ. ಮೃತ ವಿಜಯಕುಮಾರಿ ಬೆಂಗಳೂರಿನ ಪ್ರತಿಷ್ಠಿತ ರಾಮಯ್ಯ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಕೌಟುಂಬಿಕ ಕಲಹದಿಂದಾಗಿ ನಿನ್ನೆ ಬೆಳಗಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದಿಬಂದಿದೆ. ನರ್ಸ್ ವಿಜಯಕುಮಾರಿಗೆ ಗಂಡ ನಾಗರಾಜ್ ಪ್ರತಿನಿತ್ಯ ಹೊಡೆದು ಒಡೆದು ಕಿರುಕುಳ ಕೊಡುತ್ತಿದ್ದನಂತೆ. ಈ ಕುರಿತು ಪೋಷಕರ ಬಳಿ ಹೇಳಿಕೊಂಡಿದ್ದ ಮೃತ ವಿಜಯ ಕುಮಾರಿ. ಸದ್ಯ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ. ದೂರು ದಾಖಲಿಸಿ ಪೊಲೀಸರು ಮೃತ ಮಹಿಳೆ ವಿಜಯ ಕುಮಾರಿಯ ಗಂಡ ನಾಗರಾಜ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply