Breaking
4 Jun 2025, Wed

ಮರಸೂರು ಗೇಟ್ ಬಳಿ ಕಾಲೇಜು ವಿದ್ಯಾರ್ಥಿಗಳಿಂದ ಮದ್ಯಪಾನ ಮಾಡಿ ಕಾರು ಚಾಲನೆ, ಹಳ್ಳಕ್ಕೆ ಪಲ್ಟಿ ಹೊಡೆದ ಕಾರು

ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿರುವ ಘಟನೆ ಅನೇಕಲ್ ತಾಲೂಕಿನ ಮರಸೂರು ಗೇಟ್ ಬಳಿ ನಡೆದಿದೆ. ಇಲ್ಲಿನ ಸ್ಫೂರ್ತಿ ಕಾಲೇಜು ಮುಂಭಾಗ ಕೇರಳ ನೊಂದಣಿ ಹೊಂದಿರುವ ಕ್ರೂಸ್ ಕಾರು ಅತಿ ವೇಗವಾಗಿ ಬಂದು ನಿಯಂತ್ರಣ ಕಳೆದುಕೊಂಡು ಹಳ್ಳಕ್ಕೆ ಪಲ್ಟಿಯಾಗಿದ್ದು ಕಾರಿನಲ್ಲಿದ್ದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply